ಡಿಡಿಯು ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಬ್ರಹ್ಮಾವರ, ಅ.28: ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಉದ್ಯೋಗ ಆಧಾರಿತ ಕೌಶಲ್ಯಾಭಿವೃದ್ದಿ ಯೋಜನೆಯಡಿ ನಡೆಯುವ ಉಚಿತ ತರಬೇತಿಗೆ ನಿರುದ್ಯೋಗಿ ಯುವಕಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇಟ್‌ಕಾಟ್ ಸಂಸ್ಥೆಯ ಆಶ್ರಯದಲ್ಲಿ ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನಲ್ಲಿ ನವೆಂಬರ್‌ನಿಂದ ಮೂರು ತಿಂಗಳುಗಳ ಕಾಲ ನಡೆಯುವ ಈ ತರಬೇತಿಯ ಜತೆಯಲ್ಲಿ ಉದ್ಯೋಗ ದೊರಕಿಸಿಕೊಳ್ಳಲು ಸಹಾಯ ಮತ್ತು ತರಬೇತಿಯ ಅವಧಿಯಲ್ಲಿ ಪ್ರತಿ ವಿದ್ಯಾರ್ಥಿಗೆ ಒಟ್ಟು 9 ಸಾವಿರ ರೂ. ಧನಸಹಾಯ, ಸಮವಸ್ತ್ರ, ಕೋರ್ಸ್ ಪುಸ್ತಕ ಸೇರಿದಂತೆ ಉಚಿತ ತರಬೇತಿ ಸಾಮಗ್ರಿ, ಉದ್ಯೋಗಕ್ಕೆ ಸೇರಿದ ನಂತರ ಕನಿಷ್ಟ 2,000ರೂ.ನಿಂದ 6,000ರೂ. ವರೆಗೆ ಧನಸಹಾಯ, ಟ್ಯಾಬ್ಲೆಟ್ ಪೋನ್ ಬಳಕೆಯ ಮುಖಾಂತರ ಪ್ರಾಯೋಗಿಕ ತರಗತಿ ಮತ್ತು ತರಬೇತಿ ಪೂರ್ಣಗೊಳಿಸಿದ ನಂತರ ಎಲ್ಲರಿಗೂ ಸರಕಾರದಿಂದ ಸರ್ಟಿಫಿಕೇಟ್ ನೀಡಲಾಗುವುದು.
10ನೇ ತರಗತಿ ತೇರ್ಗಡೆ ಹೊಂದಿದ ಬಿಪಿಎಲ್ ಕಾರ್ಡ್ ಹೊಂದಿದ 18ರಿಂದ 35ವರ್ಷದೊಳಗಿನ ನಿರುದ್ಯೋಗಿ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು. ಎಸ್.ಸಿ/ಎಸ್.ಟಿ ಮಹಿಳೆಯರು ಮತ್ತು ಅಲ್ಪಸಂಖ್ಯಾತ ವರ್ಗದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅರ್ಜಿಯನ್ನು ಪ್ರಾಂಶುಪಾಲರು, ಕ್ರಾಸ್‌ಲ್ಯಾಂಡ್ ಕಾಲೇಜು, ಬ್ರಹ್ಮಾವರ ಇವರಿಗೆ ಕಳುಹಿಸಬಹುದು.ಹೆಚ್ಚಿನ ಮಾಹಿತಿಗೆ ದೂರವಾಣಿ: 0820-2561200, 9480230556, 9343137791ನ್ನು ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.