×
Ad

ಉಡುಪಿ: 25 ಮಂದಿಯಿಂದ ವಯೋಲಿನ್ ವಾದನ

Update: 2017-10-28 22:18 IST

ಉಡುಪಿ, ಅ.28: ಪರ್ಯಾಯ ಶ್ರೀಪೇಜಾವರ ಮಠದ ಆಶ್ರಯದಲ್ಲಿ ನಿನಾದ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಇಂದ್ರಾಳಿ ಇದರ ದಶಮಾನೋತ್ಸವ ಸಮಾರಂಭದ ಸಮಾರೋಪದ ಪ್ರಯುಕ್ತ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಇದೇ ಮೊದಲ ಬಾರಿಗೆ 25 ಮಂದಿ ವಾದಕರಿಂದ ಒಮ್ಮೆಗೇ ವಯೋಲಿನ್ ವಾದನಗಳ ಅಪೂರ್ವ ಕಾರ್ಯಕ್ರಮ ‘ನಾದಂಭ್ರಮ’ ಶುಕ್ರವಾರ ನಡೆಯಿತು.

ನಿನಾದ ಮ್ಯೂಸಿಕ್ ಅಕಾಡೆಮಿಯ ಸ್ಥಾಪಕ ಜಿ.ರವಿಕುಮಾರ್ ಮೈಸೂರು ಅವರು ತಮ್ಮ 25 ಮಂದಿ ಶಿಷ್ಯರೊಂದಿಗೆ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಇದಕ್ಕೆ ಮೊದಲು ನಿನಾದ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್‌ನ ದಶಮಾನೋತ್ಸವ ಸಮಾರೋಪವನ್ನು ಪರ್ಯಾಯ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ ಸ್ವಾಮೀಜಿ ಸಹ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಡುಪಿ ರಾಗಧನದ ಅರವಿಂದ ಹೆಬ್ಬಾರ್, ಇಂದ್ರಾಳಿ ನಿನಾದ ಮ್ಯೂಸಿಕ್ ಅಕಾಡೆಮಿಯ ವಿ.ಜಿ.ರವಿಕುಮಾರ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News