ಮಂಗಗಳ ಹತ್ಯೆಗೆ ಖಂಡನೆ

Update: 2017-10-28 17:33 GMT

ಉಡುಪಿ, ಅ.28: ಪಶ್ಚಿಮಘಟ್ಟದ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟ್‌ನಲ್ಲಿ ಮಂಗಗಳು ಕಿಡಿಗೇಡಿಗಳು ನೀಡಿದ ವಿಷ ಆಹಾರದಿಂದ ಸಾವನಪ್ಪಿದ ಘಟನೆಯನ್ನು ಸಾಮಾಜಿಕ ಕಾರ್ಯಕರ್ತರು ತೀವ್ರವಾಗಿ ಖಂಡಿಸಿ ದ್ದಾರೆ.

ಪ್ರತಿ ಜೀವಿಗಳಿಗೂ ಬದುಕುವ ಹಕ್ಕಿದೆ. ಜೀವವೈವಿಧ್ಯತೆಗಳನ್ನು ನಾಶಗೊಳಿ ಸುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಈ ದುಷ್ಕ್ರತ್ಯ ಎಸಗಿದ ತಪ್ಪಿ ಸ್ಥರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ರಾದ ನಿತ್ಯಾನಂದ ಒಳಕಾಡು, ಶಿರೂರು ತಾರಾನಾಥ್ ಮೇಸ್ತ, ಪರಿಸರವಾದಿ ವಿನಯಚಂದ್ರ ಸಾಸ್ತಾನ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News