ವಾಚ್‌ಮನ್ ದಂಪತಿಯ ವಿರುದ್ಧ ಕೊಲೆ ಯತ್ನ ದೂರು ನೀಡಿದ ಮೇಯರ್
Update: 2017-10-29 14:26 IST
ಮಂಗಳೂರು, ಅ. 29: ಮನಪಾ ಮೇಯರ್ ಕವಿತಾ ಸನಿಲ್ ತಾನು ವಾಸವಾಗಿರುವ ಅಪಾರ್ಟ್‌ಮೆಂಟ್‌ನ ವಾಚ್‌ಮನ್ ದಂಪತಿ ಪುಂಡಲೀಕ ಮತ್ತು ಕಮಲಾ ಅವರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಿಸಿದ್ದಾರೆ.
ಮೇಯರ್ ವಾಸವಾಗಿರುವ ನಗರದ ಬಿಜೈನ ಅಪಾರ್ಟ್‌ಮೆಂಟ್‌ನಲ್ಲಿ ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಸಿಡಿಸುವ ವಿಚಾರದಲ್ಲಿ ಮಕ್ಕಳ ನಡುವೆ ಉಂಟಾಗಿದ್ದ ಜಗಳ ಇದೀಗ ರಾಜಕೀಯಕ್ಕೆ ತಿರುಗಿದ್ದು, ತನ್ನ ಪುತ್ರಿಯ ಕೊಲೆಗೆ ಯತ್ನಿಸಿದ್ದಾರೆ ಎಂದು ಮೇಯರ್ ಅವರು ವಾಚ್‌ಮನ್ ದಂಪತಿಯ ವಿರುದ್ಧ ದೂರು ನೀಡಿದ್ದಾರೆ.
ಈ ಬಗ್ಗೆ ಅಪಾರ್ಟ್‌ಮೆಂಟ್‌ನ ಸಿಸಿಟಿವಿಯ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಬರ್ಕೆ ಪೊಲೀಸ್ ಠಾಣಾ ಇನ್ಸ್‌ಪಕ್ಟೆರ್ ತಿಳಿಸಿದ್ದಾರೆ.