×
Ad

ತೂಮಿನಾಡು: ಹೊರ ರಾಜ್ಯ ಕಾರ್ಮಿಕರು ಅನ್ಯರಲ್ಲ; 'ಸ್ನೇಹಿತರು' ಸಹೃದಯ ಸಂಗಮ ಕಾರ್ಯಕ್ರಮ

Update: 2017-10-29 19:53 IST

ಮಂಜೇಶ್ವರ, ಅ. 29: ಕೇರಳ ರಾಜ್ಯ ಸಾಕ್ಷರತಾ ಮಿಷನ್ ನಿರ್ದೇಶದಂತೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಗ್ರಾ. ಪಂ. ನ ಎರಡನೆ ವಾರ್ಡು ತೂಮಿನಾಡು ಜಂಕ್ಷನ್ ನಲ್ಲಿ ಹೊರ ರಾಜ್ಯ ಕಾರ್ಮಿಕರು ಅನ್ಯರಲ್ಲ, 'ಸ್ನೇಹಿತರು' ಸಹೃದಯ ಸಂಗಮ ಎಂಬ ಜಿಲ್ಲಾ ಮಟ್ಟದ ಕಾರ್ಯಕ್ರಮ ರವಿವಾರ ನಡೆಯಿತು.

ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ನಮ್ಮ ಪರಿಸರದಲ್ಲಿ ಪ್ರತ್ಯೇಕವಾಗಿಯೂ ಗಡಿ ಪ್ರದೇಶಗಳಲ್ಲಿ ಅನ್ಯ ರಾಜ್ಯದ ಹಿಂದಿ ಭಾಷೆಯನ್ನಾಡುವ ಮಂದಿ ತುಂಬಿ ಹೋಗಿ ದ್ದಾರೆ. ನಾವು ಹಿಂದಿಯನ್ನು ಕಲಿಯಬೇಕಾದ ಅನಿವಾರ್ಯತೆ ಬಂದೊದಗಿದೆ. ಸೆಲೂನ್, ಐಸ್ ಕೇಂಡಿ ಮಾರಾಟ, ಕೂಲಿ ಕೆಲಸ ಸೇರಿದಂತೆ ಹತ್ತು ಹಲ ವಾರು ಕ್ಷೇತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅನ್ಯ ರಾಜ್ಯ ಕಾರ್ಮಿಕರದ್ದೇ ಮೇಲುಗೈಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸಾಕ್ಷರತಾ ಮಿಶನ್ ಹೊರ ರಾಜ್ಯದ ಕಾರ್ಮಿಕರನ್ನು ನಮ್ಮ ಸ್ನೇಹಿತರಂತೆ ಅವರ ಜೊತೆಯಾಗಿ ಸೌಹಾರ್ದವನ್ನು ಬೆಳೆಸುವಂತೆ ನಿರ್ದೇಶಿಸಿರುವುದಾಗಿ ಅವರು ಹೇಳಿದರು.

ಜಿಲ್ಲಾ ಸಾಕ್ಷರತಾ ಕೋರ್ಡಿನೇಟರ್ ವಿ ವಿ ಶ್ಯಾಂ ಲಾಲ್ ಮುಖ್ಯ ಪ್ರಭಾಷಣ ಗೈದರು.  ಮುಹಮ್ಮದ್ ಅಜೀಂ ಮಣಿಮುಂಡ ತರಗತಿ ನಡೆಸಿದರು. ಮಂಜೇಶ್ವರ ಗ್ರಾ.ಪಂ. ಉಪಾಧ್ಯಕ್ಷೆ ಶಶಿಕಲ, ಮಂಜೇಶ್ವರ ಗ್ರಾ. ಪಂ. ಕೋರ್ಡಿನೇಟರ್ ಸಿದ್ದೀಖ್ ಮಂಜೇಶ್ವರ, ಗ್ರೇಸಿ ವೇಗಸ್, ಹರಿನಾಕ್ಷಿ, ಶೋಭಾ ಸುಧಾ ಎಂಬವರು ಮಾತನಾಡಿದರು.

ಈ ಸಂದರ್ಭ ಗ್ರಾ. ಪಂ. ಸದಸ್ಯರುಗಳು ಉಪಸ್ಥರಿದ್ದರು. ಹಲವಾರು ಹೊರ ರಾಜ್ಯ ಕಾರ್ಮಿಕರು ಕುಟುಂಬ ಸಮೇತ ಸಂಗಮದಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News