ರಾಷ್ಟ್ರೀಯ ಅರ್ಹತಾ ಪರೀಕ್ಷಾ ತಯಾರಿ ಕಾರ್ಯಾಗಾರ
Update: 2017-10-30 22:02 IST
ಉಡುಪಿ, ಅ.30: ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ವಾಣಿಜ್ಯ ವಿಭಾಗದ ವತಿ ಯಿಂದ ಅಂತಿಮ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಎರಡು ದಿನಗಳ ನೆಟ್(ರಾಷ್ಟ್ರೀಯ ಅರ್ಹತಾ ಪರೀಕ್ಷೆಯ) ಕಾರ್ಯಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ನೀಲಾವರ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳ ಬೇಕು ಎಂದು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮನೋಹರ್ ಮಾತನಾಡಿದರು. ಡಾ.ಭಾಸ್ಕರ್ ಶೆಟ್ಟಿ ಸಾಪ್ತಾಹಿಕ ಭಾಷಣ ಮಾಡಿದರು ಕಾರ್ಯಕ್ರಮ ಸಂಯೋಜಕ ಡಾ. ಉಮೇಶ್ ಮಯ್ಯ ಉಪಸ್ಥಿತರಿದ್ದರು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶು ಪಾಲ ಪ್ರೊ.ಜಗದೀಶ್ ರಾವ್ ವಹಿಸಿದ್ದರು.
ಡಾ. ಗುರುರಾಜ ಪ್ರಭು ಸ್ವಾಗತಿಸಿದರು. ಡಾ.ಅಶೋಕ್ ಭಂಡಾರಿ ವಂದಿಸಿ ದರು. ಗಣೇಶ್ಪಕೆ. ಕಾರ್ಯಕ್ರಮ ನಿರೂಪಿಸಿದರು.