ಗಾಂಜಾ ಮಾರಾಟ ಮಾಡುತ್ತಿದ್ದ ಐವರ ಸೆರೆ
ಮಂಗಳೂರು, ಅ.30: ನಗರದ ಬಿಜೈ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತಿದ್ದ ಐವರನ್ನು ಆರೋಪಿಗಳನ್ನು ಮಂಗಳೂರು ನಗರ ದಕ್ಷಿಣ ಉಪವಿಭಾಗದ ರೌಡಿ ನಿಗ್ರಹದ ದಳದ ಪೊಲೀಸರು ಬಂಧಿಸಿದ್ದಾರೆ.
ಬಿಜೈ ರಾಮ ಮಂದಿರದ ಬಳಿಯಲ್ಲಿರುವ ತಿರುಮೇಲೇಶ್ ಎಂಬವರ ಮನೆಯಲ್ಲಿ ರೋಶನ್ ಎಂಬಾತ ಗಾಂಜಾವನ್ನು ತಂದು, ಪ್ಯಾಕೆಟ್ ಮಾಡಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮನೆಗೆ ದಾಳಿ ಮಾಡಿ ರೋಶನ್ ವೇಗಸ್ (23), ಬಿಜೈಯ ಅನಿಲ್ ಡಿಸೋಜ (45), ಎಯ್ಯೆಡಿಯ ಮೆಲ್ವಿನ್ ರೋಹಿತ್ (22), ಬಿಕರ್ನಕಟ್ಟೆಯ ರಕ್ಷಿತ್ ಶೆಟ್ಟಿ (21), ಬೆಂದೂರ್‌ವೆಲ್‌ನ ಯಜ್ಞೇಶ ಶೆಟ್ಟಿ (21) ಎಂಬವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಈ ಮನೆಯಲ್ಲಿ ಮಾರಾಟಕ್ಕೆ ಇಟ್ಟಿದ್ದ 61 ಗಾಂಜಾ ಪ್ಯಾಕೇಟ್ ಸಹಿತ 2.200 ಕಿ.ಗ್ರಾಂ ತೂಕದ ಗಾಂಜಾ, 5 ಮೊಬೈಲ್ ಫೋನ್ ಹಾಗೂ 2,390 ರೂ. ವಶಪಡಿಸಲಾಗಿದೆ. ಈ ಸೊತ್ತಿನ ಒಟ್ಟು ಮೌಲ್ಯ 78,390 ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳು 2 ವರ್ಷದಿಂದ ತೀರ್ಥಹಳ್ಳಿಯಿಂದ ಗಾಂಜಾ ತಂದು, ಪ್ಯಾಕೇಟ್ ಮಾಡಿ ಅದನ್ನು ಸಾರ್ವಜನಿಕರಿಗೆ ಮತ್ತು ನಗರ ಕಾಲೇಜಿನ ವಿದ್ಯಾರ್ಥಿ ಗಳಿಗೆ ಮಾರಾಟ ಮಾಡುತ್ತಿರುವುದಾಗಿ ವಿಚಾರಣೆಯ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.