×
Ad

​ಟ್ಯಾಂಕರ್ ಢಿಕ್ಕಿ: ಬೈಕ್ ಸವಾರ ಮೃತ್ಯು

Update: 2017-10-30 23:08 IST

ಮಂಗಳೂರು, ಅ.30: ರಾ.ಹೆ.17ರ ಕೂಳೂರು ಸಮೀಪದ ಕೆಐಒಸಿಎಲ್ ಬಳಿ ಟ್ಯಾಂಕರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಸ್ಥಳೀಯ ನಿವಾಸಿ ಮಾಧವ ಪೂಜಾರಿ ಮೃತಪಟ್ಟವರು. ಮಂಜುನಾಥ್ ಎಂಬವರು ಸುರತ್ಕಲ್‌ನಿಂದ ಕೂಳೂರು ಕಡೆಗೆ ರಿಕ್ಷಾದಲ್ಲಿ ಬರುತ್ತಿದ್ದಾಗ ಅವರ ಪರಿಚಯದ ಮಾಧವ ಪೂಜಾರಿ ಬೈಕ್‌ನಲ್ಲಿ ಕೂಳೂರು ಕಡೆಗೆ ತೆರಳುತ್ತಿದ್ದರು. ಕೆಐಒಸಿಎಲ್ ತಲುಪಿದಾಗ ಅತೀ ವೇಗ ಅಜಾಗರೂಕತೆಯಿಂದ ಚಲಿಸಿಕೊಂಡು ಬಂದ ಟ್ಯಾಂಕರ್ ಮಾಧವ ಪೂಜಾರಿ ಚಲಿಸುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರ ಗಾಯಗೊಂಡ ಮಾಧವ ಪೂಜಾರಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಂಜುನಾಥ್ ನೀಡಿದ ದೂರಿನಂತೆ ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News