ಶಾಸಕ ಲೋಬೊ ನೇತೃತ್ವದಲ್ಲಿ ಲಕ್ಷದ್ವೀಪಕ್ಕೆ ನಿಯೋಗ
Update: 2017-10-30 23:16 IST
ಮಂಗಳೂರು, ಅ.30: ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗ ಲಕ್ಷದ್ವೀಪಕ್ಕೆ ತೆರಳಿ ಅಲ್ಲಿನ ಸರಕಾರದೊಂದಿಗೆ ಮಾತು ಕತೆ ನಡೆಸಿ ಮಂಗಳೂರಲ್ಲಿ ವ್ಯಾಪಾರ ವಹಿವಾಟು ಪುನರಾರಂಭಿಸಲು ಪ್ರಯತ್ನ ಸಾಗಿಸಿವೆ.
ಈಗ ಲಕ್ಷದ್ವೀಪವು ಮಂಗಳೂರಿನ ಬದಲು ಕೇರಳವನ್ನು ಹೆಚ್ಚು ನೆಚ್ಚಿಕೊಂಡಿದೆ. ಮಂಗಳೂರಲ್ಲಿ ಜೆಟ್ಟಿಯ ಸಮಸ್ಯೆ ಇದ್ದು, ಅದಕ್ಕಾಗಿ ಪರ್ಯಾಯ ಕ್ರಮ ಅನುಸರಿಸುತ್ತಿದೆ. ಈ ಮಧ್ಯೆ ಶಾಸಕರ ನೇತೃತ್ವದ ನಿಯೋಗವು ಲಕ್ಷದ್ವೀಪವು ಮಂಗಳೂರಿಗೇ ಬರುವಂತೆ ಮಾತುಕತೆ ನಡೆಸಲಿದೆ.
ಲಕ್ಷದ್ವೀಪವನ್ನು ವ್ಯಾಪಾರ ಪುನರಾರಂಭ ಮಾಡುವಂತೆ ಮನವೊಲಿಸಲಾಗುವುದು ಮತ್ತು ಹಳೆ ಬಂದರಿನಲ್ಲಿ 70 ಕೋ.ರೂ. ವೆಚ್ಚದಲ್ಲಿ ಜೆಟ್ಟಿ ನಿರ್ಮಿಸಲು ಮನವಿ ಮಾಡಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.