ನ.2: ಕೆನರಾ ಹೈಸ್ಕೂಲ್‌ನಲ್ಲಿ ಜಿಲ್ಲಾ ಮಟ್ಟದ ರೊಟೆಕ್ಸ್ ಡಿಬೇಟ್
ಮಂಗಳೂರು, ಅ.30: ರಾಜ್ಯಮಟ್ಟದ ರೊಟೆಕ್ಸ್ ಡಿಬೇಟ್ 2017ರ ದ.ಕ. ಜಿಲ್ಲಾ ಸುತ್ತಿನ ಸ್ಪರ್ಧೆಯು ನ.2ರಂದು ನಗರದ ಡೊಂಗರಕೇರಿ ಕೆನರಾ ಸಿಬಿಎಸ್‌ಇ ಹೈಸ್ಕೂಲಿನಲ್ಲಿ ಆಯೋಜಿಸಲಾಗಿದೆ.
ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ಮತ್ತು ಮೂಡುಬಿದಿರೆ ಇನೊವೇಟಿವ್ ಲರ್ನಿಂಗ್ ಫೌಂಡೇಶನ್ ಆಯೋಜಿಸಿರುವ ಚರ್ಚಾ ಸ್ಪರ್ಧೆಯನ್ನು ಮಂಗಳೂರಿನ ಸೆಂಟರ್ ಫಾರ್ ಇಂಟರಗ್ರೇಟ್ ಲರ್ನಿಂಗ್ (ಸಿಐಎಲ್) ಸಂಸ್ಥೆಯು ನಡೆಸಿಕೊಡುತ್ತದೆ.
ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುವ ರೊಟೆಕ್ಸೃ್ ಡಿಬೇಟ್ ವಿಶಿಷ್ಟ ಚರ್ಚಾ ಸ್ಪರ್ಧೆ ಇದಾಗಿದ್ದು, ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸುವ ಮೂಲಕ ವಿದ್ಯಾರ್ಥಿಗಳ ಮಾತುಗಾರಿಕೆ ಕೌಶಲವನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ಜಿಲ್ಲಾ ಸುತ್ತಿನಲ್ಲಿ ವಿಜೇತರಾದವರು ಮೂಡುಬಿದಿರೆಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ನೋಂದಣಿಗಾಗಿ
ಮೊ.ಸಂ: 9886347946ರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.