‘ಜನ ಏಕತಾ, ಜನ ಅಧಿಕಾರ್ ಆಂದೋಲನ’ದಿಂದ ಪಂಜಿನ ಮೆರವಣಿಗೆ
Update: 2017-10-30 23:27 IST
ಮಂಗಳೂರು, ಅ.30: ‘ಜನ ಏಕತಾ, ಜನ ಅಧಿಕಾರ್ ಆಂದೋಲನ’ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ದೇಶದ ಜನತೆಯ ಏಕತೆಯ ಮೇಲಿನ ದಾಳಿ ಹಾಗೂ ದುಡಿಯುವ ಜನರ ಹಕ್ಕುಗಳ ಮೇಲೆ ಹೆಚ್ಚುತ್ತಿರುವ ದಾಳಿಗಳ ವಿರುದ್ಧ ಸ್ವಾತಂತ್ರ ಜ್ಯೋತಿಯ ದ್ಯೋತಕವಾಗಿ ಸೋಮವಾರ ಸಂಜೆ ನಗರದಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ನಗರದ ಆರ್‌ಟಿಒ ವೃತ್ತದಿಂದ ಆರಂಭಗೊಂಡ ಪಂಜಿನ ಮೆರವಣಿಗೆಯು ರಾವ್ ಆ್ಯಂಡ್ ರಾವ್ ಸರ್ಕಲ್ ಮೂಲಕ ಸೆಂಟ್ರಲ್ ಮಾರ್ಕೆಟ್‌ವರೆಗೆ ಸಾಗಿ ಬಳಿಕ ಅಲ್ಲಿ ಸಾರ್ವಜನಿಕ ಸಭೆ ನಡೆಸಿತು.
ಕಾರ್ಮಿಕರು, ರೈತರು, ವಿದ್ಯಾರ್ಥಿ, ಯುವಜನರು, ಮಹಿಳೆಯರು ಪಾಲ್ಗೊಂಡ ಈ ಕಾರ್ಯಕ್ರಮದ ನೇತೃತ್ವವನ್ನು ‘ಜನ ಏಕತಾ, ಜನ ಅಧಿಕಾರ್ ಆಂದೋಲನ’ದ ಸಂಚಾಲಕರಾದ ಎಚ್.ವಿ.ರಾವ್, ವಸಂತ ಆಚಾರಿ ಮತ್ತಿತರರು ವಹಿಸಿದ್ದರು.