ದ.ಕ. ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಎಸ್.ಎಂ. ರಶೀದ್ ಹಾಜಿ, ಭಾಸ್ಕರ್ ರೈ, ಕೇಶವ ಕುಂದರ್ ಸೇರಿದಂತೆ ಪಟ್ಟಿಯಲ್ಲಿ ಹಲವರು.....
ಮಂಗಳೂರು, ಅ.31: ದ.ಕ. ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ದ.ಕ. ಜಿಲ್ಲಾಡಳಿತ ಮಂಗಳವಾರ ಪ್ರಕಟಿಸಿದೆ.
16 ಕ್ಷೇತ್ರದಲ್ಲಿ 16 ಸಾಧಕರನ್ನು ಹಾಗೂ 4 ಸಂಘಟನೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಜಿಲ್ಲಾಡಳಿತವು ನ. 1ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ.
ಹಾಜಿ ಎಸ್.ಎಂ. ರಶೀದ್ ಮಂಗಳೂರು (ಶಿಕ್ಷಣ), ಡಾ. ನಂದಕಿಶೋರ್ ಬಿ. (ವೈದ್ಯಕೀಯ), ವೈ.ಕೃಷ್ಣ ಸಾಲಿಯಾನ್ ಏಳಿಂಜೆ (ಕೃಷಿ), ಕೇಶವ ಕುಂದರ್ (ಪತ್ರಿಕೋದ್ಯಮ), ಬೆಂಗ್ರೆ ಜಯ ಸುವರ್ಣ -ಕಬಡ್ಡಿ (ಕ್ರೀಡೆ), ಕೋಟಿಪರವ ಮಾಡಾವು (ಭೂತಾರಾಧನೆ), ಶ್ರೀಧರ ಹೊಳ್ಳ ಕೊಟ್ಟಾರ (ನೃತ್ಯ), ಕಲಾಯಿ ಈಶ್ವರ ಪೂಜಾರಿ (ನಾಟಿ ವೈದ್ಯ), ಕೆ.ಆರ್.ನಾಥ್ ಕೊಂಚಾಡಿ (ಸಮಾಜಸೇವೆ), ದೇವಿಪ್ರಸಾದ್ ಬೆಳ್ತಂಗಡಿ- (ಸಂಪಾದಕ-ಬರಹಗಾರರು-ಸಣ್ಣ ಪತ್ರಿಕೆ ಕ್ಷೇತ್ರ), ಕೆ. ದೇವದಾಸ್ ಭಂಡಾರಿ ದೊಂಬಡ್ಡೆಗುತ್ತು (ಸಮಾಜ ಸೇವೆ), ಭಾಸ್ಕರ್ ರೈ ಕುಕ್ಕುವಳ್ಳಿ (ಯಕ್ಷಗಾನ), ರಾಮಕೃಷ್ಣ ಕುದ್ರೋಳಿ (ದೇಹದಾರ್ಢ್ಯ), ಬಿ.ಕೆ. ಮೋನಪ್ಪಆಚಾರ್ಯ ಬೈದಗುತ್ತು (ಶಿಲ್ಪಶಾಸ್ತ್ರ), ಅಶೋಕ್ ಭಟ್ ಎನ್. ಉಜಿರೆ (ಯಕ್ಷಗಾನ), ವಿನ್ನಿ ಫೆರ್ನಾಂಡಿಸ್ ಮಂಗಳೂರು (ಸಿನೆಮಾ).
ಸಮಾಜ ಸೇವೆಗಾಗಿ ನಾಲ್ಕ ಸಂಘಟನೆಗಳಾದ ಮಂಗಳೂರಿನ ಯುವವಾಹಿನಿ (ರಿ) ಮತ್ತು ಅಖಿಲ ಭಾರತ ಮುಂಡಾಲ ಯುವ ವೇದಿಕೆ (ರಿ) ಹಾಗೂ ಚಿಲಿಂಬಿಯ ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್, ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್‌ಗೆ ಪ್ರಶಸ್ತಿ ಘೋಷಿಸಲಾಗಿದೆ.