×
Ad

ನ.1ರಿಂದ ಮನಪಾದಲ್ಲಿ ಈ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯ !

Update: 2017-10-31 18:57 IST

ಮಂಗಳೂರು, ಅ.31: ಕಾಗದ ರಹಿತ ಕಚೇರಿಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನ. 1ರಿಂದ ಕೆಲವೊಂದು ಸೇವೆಗಳು ಆನ್‌ಲೈನ್ ಮೂಲಕ ಲಭ್ಯವಾಗಲಿದೆ.

ನೀರು ಸರಬರಾಜು ಸಂಪರ್ಕ ಪಡೆಯುವುದು, ನೀರು ಸರಬರಾಜು ಬಿಲ್ಲು ಪಾವತಿ, ಒಳಚರಂಡಿ ಸಂಪರ್ಕ ಪಡೆಯುವುದು, ಖಾತೆ ನೋಂದಾವಣೆ, ಖಾತೆ ಯಥಾ ಪ್ರತಿ ಪಡೆಯುವುದು, ಖಾತೆ ಬದಲಾವಣೆ, ಪುರಭವನ ಕಾದಿರಿಸುವಿಕೆ, ಮೈದಾನಗಳ ಕಾದಿರಿಸುವಿಕೆ, ಕಟ್ಟಡ ಪರವಾನಿಗೆ, ಜಾಹಿರಾತು ಅಳವಡಿಸುವ ಸೇವೆಗಳು ಇನ್ನು ಮುಂದೆ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಸಾರ್ವಜನಿಕರು ತಮ್ಮ ಮನೆಗಳಿಂದಲೇ ಅಥವಾ ತಾವು ಇರುವಲ್ಲಿಂದಲೇ ಈ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ಮನಪಾ ಸಾಮಾನ್ಯ ಸಭೆಯ ಆರಂಭದಲ್ಲಿ ಆನ್‌ಲೈನ್ ಸೇವೆಗಳಿಗೆ ಚಾಲನೆ ನೀಡಿದ ಮೇಯರ್ ಕವಿತಾ ಸನಿಲ್ ತಿಳಿಸಿದರು.

ಸಾರ್ವಜನಿಕರು ಈ ಸೇವೆಗಳನ್ನು ಮಂಗಳೂರು ಮಹಾನಗರ ಪಾಲಿಕೆಯ ಅಂತರ್ ಜಾಲದಲ್ಲಿ ಅಳವಡಿಸಿರುವ ಲಿಂಕ್ ಮೂಲಕ ಸಂಪರ್ಕಿಸಿ ಪಡೆಯಬಹುದು.

ಸಾರ್ವಜನಿಕರು ತಮ್ಮ ಕಡತ ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನೂ ಪಡೆಯಬಹುದಾಗಿದೆ. www.mangalorecity.mrc.gov.in > mcconlineservices> < use listed services ಮೂಲಕ ಈ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ಮೇಯರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News