ನ. 3: ‘ರಂಗ್‌ರಂಗ್‌ದ ದಿಬ್ಬಣ’ ತುಳು ಚಲನಚಿತ್ರ ತೆರೆಗೆ
ಮಂಗಳೂರು, ಅ.31: ವಾರಿನ್ ಕಂಬೈನ್ಸ್ ಲಾಂಛನದಲ್ಲಿ ತಯಾರಾಗಿರುವ ಶರತ್ ಕೋಟ್ಯಾನ್ ನಿರ್ಮಾಣದ ತುಳು ಚಿತ್ರ ರಂಗ್ ರಂಗ್ ದಿಬ್ಬಣ ನ. 3ರಂದು ತೆರೆ ಕಾಣಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಹಾಸ್ಯ ನಟ ದಿನೇಶ್ ಅತ್ತಾವರ, ಮಂಗಳೂರು, ಉಡುಪಿ ಸೇರಿದಂತೆ ರಾಜಯಾಂದ್ಯತ ಚಿತ್ರ ತೆರೆಕಾಣಲಿದೆ ಎಂದರು.
ಚಿತ್ರಕ್ಕೆ ಕೃಷ್ಣ ಪ್ರಸಾದ್ ಉಪ್ಪಿನಕೋಟೆ ನಿರ್ದೇಶನ ನೀಡಿದ್ದು, ಚಂದ್ರಕಾತ್ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಬಾಲಿವುಡ್ ಹಿನ್ನೆಲೆ ಗಾಯಕರಾದ ಉದಿತ್ ನಾರಾಯಣ್, ಜಾವೇದ್ ಅಲಿ, ಅನುರಾಧಾ ಭಟ್ ಮೊದಲಾವದರು ಕಂಠದಾನ ಮಾಡಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಸಂಪೂರ್ಣ ಕರಾವಳಿಯಲ್ಲಿ ಚಿತ್ರೀಕರಣಗೊಂಡಿದೆ ಎಂದರು.
ತುಳು ಸಿನೆಮಾರಂಗದಲ್ಲಿ ಇದೇ ಪ್ರಥಮ ಬಾರಿಗೆ ಬುಲೆಟ್‌ನಲ್ಲಿ ಎಂಟ್ರಿ ನೀಡುವಂತಹ ಸವಾಲಿನ ಪಾತ್ರವನ್ನು ಚಿತ್ರದಲ್ಲಿ ತನಗೆ ನೀಡಿದ್ದಾರೆ ಎಂದು ಚಿತ್ರದ ನಟಿಯರಲ್ಲಿ ಒಬ್ಬಾಕೆಯಾದ ಸಂಹಿತಾ ಶಾ ಹೇಳಿದರು.
ತುಳುನಾಡಿನ ಅಪರೂಪದ ಪ್ರೇಮ ಕಥೆ ಹಾಗೂ ಕಾಮಿಡಿ ದೃಶ್ಯಗಳಿಂದ ಕೂಡಿದ ಚಿತ್ರವನ್ನು ಕುಟುಂಬ ಸಮೇತರಾಗಿ ನೋಡಬಹುದಾಗಿದೆ. ಕಡಲಮಗೆ ಚಿತ್ರಕತೆ ಬರೆದಿರುವ ನಿರ್ದೇಶಕ ಎಸ್. ನಾರಾಯಣ್ ಗರಡಿಯಲ್ಲಿ ಪಳಗಿರುವ ಯುವ ನಿರ್ದೇಶಕರು ಚಿತ್ರಕ್ಕೆ ಚಿತ್ರಕತೆ ಬರೆದಿದ್ದಾರೆ ಎಂದು ಚಿತ್ರ ನಿರ್ಮಾಪಕ ಬೆಂಗಳೂರಿನ ಯುವ ಉ್ಯಮಿ ಶರತ್ ಕೋಟ್ಯಾನ್ ತಿಳಿಸಿದರು.
ಚಿತ್ರದಲ್ಲಿ ನಾಯಕ ನಟರಾಗಿ ರವಿರಾಜ್ ಶೆಟ್ಟಿ ನಟಿಸಿದ್ದು, ಇನ್ನೋರ್ವ ನಾಯಕಿಯಾಗಿ ಸ್ವಾತಿ ಬಂಗೇರ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ದಿನೇಶ್ ಅತ್ತಾವರ್, ಉಮೇಶ್ ಮಿಜಾರ್, ರಾಘವೇಂದ್ರ ರೈ, ರಂಜನ್ ಬೋಳೂರು ಜತೆ ಆರ್.ಜೆ. ರೂಪೇಶ್‌ರವರು ಕೂಡಾ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ ಎಂದು ನಿರ್ದೇಶಕ ಕೃಷ್ಣ ಪ್ರಸಾದ್ ಉಪ್ಪಿನಕೋಟೆ ತಿಳಿಸಿದರು.