×
Ad

ಹೊಸ ಅವಕಾಶಗಳನ್ನು ಪರಿಚಯಿಸಿದ ಭಾರತದ ಉತ್ಕೃಷ್ಟ ಸಾರಿಗೆ, ಪ್ರವಾಸೋದ್ಯಮ ಪ್ರದರ್ಶನ

Update: 2017-10-31 20:14 IST

ಮಂಗಳೂರು, ಅ.31: ನಗರದ ಟಿವಿ ರಮಣ ಪೈ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಇಂಡಿಯನ್ ಇಂಟರ್‌ನ್ಯಾಷನಲ್ ಟ್ರಾವೆಲ್‌ಎಕ್ಸಿಬಿಷನ್ ಹೊಸ ಅವಕಾಶಗಳನ್ನು ಪರಿಚಯಿಸಲು ಸಾಧ್ಯವಾಗಿದೆ ಎಂದು ಹೆರಾ ಟ್ರಾವೆಲ್ ಟೂರಿಸಂ ಆ್ಯಂಡ್ ಕಾರ್ಗೊ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಮೆಚ್ಚುಗೆ ವ್ಯಕ್ತಪಡಿಸಿದೆ.

ಭಾರತದ ಉತ್ಕೃಷ್ಟ ಸಾರಿಗೆ ಮತ್ತು ಪ್ರವಾಸೋದ್ಯಮ ಪ್ರದರ್ಶನದಲ್ಲಿ ಮಂಗಳೂರಿನಲ್ಲಿ ಸಾರಿಗೆ ಜಗತ್ತಿಗೆ ತನ್ನನ್ನು ತೆರೆದುಕೊಳ್ಳಲು ಅವಕಾಶ ಕಲ್ಪಿಸಲಾಯಿತು. ಮಾತ್ರವಲ್ಲದೆ ಇದು ಈವರೆಗೆ ಅಪರಿಚಿತವಾಗಿದ್ದ ತೆರೆಮರೆಯಲ್ಲಿದ್ದ ಸಾರಿಗೆ ಜಗತ್ತನ್ನು ಉತ್ಕೃಷ್ಟ ಮಟ್ಟದಲ್ಲಿ ಪರಿಚಯಿಸಿಕೊಳ್ಳಲು ವೇದಿಕೆಯನ್ನು ಒದಗಿಸಿತು.

ಹೆರ್ರಾ ಗ್ರೂಪ್ ಮತ್ತು ಬ್ರಾಂಡ್‌ನಡಿ ನಮ್ಮ ಕಂಪನಿಯು ‘‘ಹೆರಾ ಟ್ರಾವೆಲ್ ಟೂರಿಸಂ ಮತ್ತು ಕಾರ್ಗೊ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’’ ಪ್ರಮುಖ ಸ್ಥಾನದಲ್ಲಿ ಪ್ರದರ್ಶಿಸಲ್ಪಡುವ ಮೂಲಕ ಹೆಚ್ಚಿನ ಅವಕಾಶಗಳನ್ನು ಪಡೆಯಲು ಸಾಧ್ಯವಾಗಿದೆ. ಅಂತಾರಾಷ್ಟ್ರೀಯ ಟೂರ್ ನಿರ್ವಾಹಕರಾಗಿ ನಮಗೆ ಈ ಅವಕಾಶವು ‘ಹಜ್ ಉಮ್ರಾ ಸಚಿವಾಲಯಾದ ಅಧಿಕೃತ ಏಜೆಂಟ್’ ಆಗಿಯೂ ನಾವು ನಮ್ಮ ಹೊಸ ಪಾತ್ರವನ್ನು ಜಗತ್ತಿಗೆ ತಿಳಿಯಪಡಿಸಲು ಪ್ರದರ್ಶನವು ಅವಕಾಶವನ್ನು ಕಲ್ಪಿಸಿದೆ. ಸಹಸ್ರಾರು ಮಂದಿ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಈ ಕಾರ್ಯಕ್ರಮ ಯಶಸ್ಸು ಕಂಡಿದೆ. ವಿವಿಧ ಪ್ರದೇಶಗಳ ಟ್ರಾವೆಲ್ ಸಂಸ್ಥೆಗಳು ತಮ್ಮ ಕಂಪನಿಯ ಪ್ರತಿನಿಧಿತ್ವವನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ಬಹುವಿಧದ ಪರ್ಯಾಯ ಆಯ್ಕೆಗೂ ವೇದಿಕೆಯನ್ನು ಕಲ್ಪಿಸುವಲ್ಲಿ ಸಹಕಾರಿಯಾಗಿದೆ. ಪ್ರವಾಸೋದ್ಯಮ ಉದ್ಯಮದಲ್ಲಿನ ವ್ಯಾಪಕ ಅವಕಾಶಗಳಿಗೆ ಪ್ರದರ್ಶನ ಸಾಕ್ಷಿಯಾಯಿತಲ್ಲದೆ, ವಿಶ್ವದಲ್ಲಿನ ಅದರಲ್ಲೂ ಮುಖ್ಯವಾಗಿ ಭಾರತದ ಕರ್ನಾಟಕದಲ್ಲಿನ ಪ್ರವಾಸೋದ್ಯಮದ ಬೆಳವಣಿಗೆಯತ್ತ ಪ್ರದರ್ಶನ ಬೆಳಕು ಬೀರಿದೆ. ಪ್ರದರ್ಶನವು ದಕ್ಷಿಣ ಕನ್ನಡದ ಶ್ರೀಮಂತ ಸಂಸ್ಕೃತಿಯ ಬಗ್ಗೆಯೂ ಬೆಳಕು ಚೆಲ್ಲಿದೆ ಮತ್ತು ಇನ್ನಷ್ಟು ಹೊಸ ಅವಕಾಶಗಳನ್ನು ತೆರೆದಿದೆ ಎಂದು ಹೆರಾ ಗ್ರೂಪ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News