×
Ad

ನ.1ರಿಂದ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ

Update: 2017-10-31 20:27 IST

ಉಡುಪಿ, ಅ.31: ಕಾಲುಬಾಯಿ ರೋಗ ಜಾನುವಾರುಗಳಿಗೆ ಮಾರಣಾಂತಿಕ ಕಾಯಿಲೆಯಾಗಿದ್ದು, ಈ ರೋಗ ನಿಯಂತ್ರಣಕ್ಕಾಗಿ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಯೋಜನೆಯಡಿ 13ನೇ ಸುತ್ತಿನ ಲಸಿಕಾ ಕಾರ್ಯಕ್ರಮ ನ.1ರಿಂದ ನ.25ರ ಅವಧಿಯಲ್ಲಿ ಪಶುಪಾಲನಾ ಇಲಾಖೆ ಮತ್ತು ದ.ಕ. ಹಾಲು ಒಕ್ಕೂಟ ಮಂಗಳೂರು ಇವರ ಸಹಯೋಗದೊಂದಿಗೆ ಕೈಗೊಳ್ಳಲಾಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಲಸಿಕೆಗೆ ಅರ್ಹವಿರುವ 2,37,000 ಜಾನುವಾರು ಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು. ಈ ಹಿಂದಿನ ಸುತ್ತುಗಳಲ್ಲಿ ಲಸಿಕೆ ಹಾಕಿಸಿದ್ದರೂ ಸಹ ಮತ್ತೊಮ್ಮೆ ಈ ಸುತ್ತಿನಲ್ಲಿ ಲಸಿಕೆ ಹಾಕಿಸುವಂತೆ ಹಾಗೂ ಹೈನುಗಾರರು ಪೂರ್ಣ ಸಹಕಾರವನ್ನು ಕೊಟ್ಟು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಲು ತಿಳಿಸಲಾಗಿದೆ.

ಉದ್ಘಾಟನೆ: 13ನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಉದ್ಘಾಟನೆ ನ.1ರ ಬೆಳಗ್ಗೆ 7:15ಕ್ಕೆ ಗುಳಿಬೆಟ್ಟು (ಸರೋಜಿನಿ ಶೆಟ್ಟಿ ಮನೆಬಳಿ), ಕೆಮ್ಮಣ್ಣು ಪದವಿಪೂರ್ವ ಕಾಲೇಜಿನ ಬಳಿ ಪಡುತೋನ್ಸೆ ಇಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಪಡುತೋನ್ಸೆ ಗ್ರಾಪಂ ಅಧ್ಯಕ್ಷೆ ಪೌಝಿಯಾ ಸಾದಿಕ್ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News