×
Ad

ನೊಂದವರಿಗೆ ನ್ಯಾಯ ದೊರಕಿಸಲು ಬದ್ಧ: ವೆಂಕಟೇಶ ನಾಯ್ಕ

Update: 2017-10-31 20:35 IST

ಉಡುಪಿ, ಅ.31: ನೊಂದ ಮಹಿಳೆಯರು ನೇರವಾಗಿ ನನಗೆ ದೂರು ಕೊಡಿ, ನೊಂದವರಿಗೆ ನ್ಯಾಯ ಹಾಗೂ ಪರಿಹಾರವನ್ನು ಕೊಡಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಜ್ಜಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ ನಾಯ್ಕ ಟಿ. ಹೇಳಿದ್ದಾರೆ.

ಮಾನವ ಹಕ್ಕುಗಳ ವಿಶೇಷ ನ್ಯಾಯಾಧೀಶರೂ ಆಗಿರುವ ಜಿಲ್ಲಾ ನ್ಯಾಯಾಧೀಶರು ಇಂದು ಮಣಿಪಾಲದ ಡಾ.ವಿ.ಎಸ್.ಆಚಾರ್ಯ ಸಭಾಂಗಣ ದಲ್ಲಿ ಆಯೋಜಿಸಲಾದ ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಇಲಾಖಾ ಯೋಜನೆ ಮತ್ತು ಕಾಯಿದೆ ಕುರಿತು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಭಾರತದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ಮತ್ತು ನ್ಯಾಯದಾನದ ಕಾನೂನು ರೂಪಿಸಿದ್ದು, ಕಾಯಿದೆಗಳ ಅನುಷ್ಠಾನ ಅಧಿಕಾರಿಗಳ ಹೊಣೆ. ಅದರಲ್ಲೂ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸಂವಿಧಾನಾತ್ಮಕ ಹಕ್ಕುಗಳ ಜೊತೆಗೆ ಕಾಯಿದೆಗಳನ್ನು ತಂದಿದೆ. ಕಾಯಿದೆಗಳ ಬಗ್ಗೆ ಜಾಗೃತರಾಗಿ ಪ್ರತಿಯೊಬ್ಬರು ಅರಿವು ಮೂಡಿಸಿಕೊಂಡರೆ ಶೋಷಣೆ ಮುಕ್ತ ಸಮಾಜ ಸಾಧ್ಯ ಎಂದರು.

ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳು, ಸಂರಕ್ಷಣಾ ಕಾಯಿದೆ ಜೊತೆಗೆ ಅವರ ಅಭಿವೃದ್ಧಿಗಾಗಿರುವ ಯೋಜನೆಗಳ ಸದ್ಬಳಕೆ ಬಗ್ಗೆಯೂ ನ್ಯಾಯಾಧೀಶರು ತಮ್ಮ ಉದ್ಘಾಟನಾ ಬಾಷಣದಲ್ಲಿ ಪ್ರಸ್ತಾವಿಸಿದರು. ಮಕ್ಕಳ ರಕ್ಷಣಾ ನೀತಿ, ಲೈಂಗಿಕ ದೌರ್ಜನ್ಯ ತಡೆಗೆ ಪೋಕ್ಸೋ ಕಾಯಿದೆ ಬಗ್ಗೆ ಎಲ್ಲರೂ ಅರಿತು ಉತ್ತಮ ಸಮಾಜಕ್ಕಾಗಿ ತಮ್ಮ ಕೊಡುಗೆಯನ್ನು ನೀಡಬೇಕೆಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ. ಪಾಟೀಲ್ ಮಾತನಾಡಿ, ಈಗಾಗಲೇ ನೊಂದ ಮಹಿಳೆಯರನ್ನು ಸಂತೈಸುವ ಸಾಂತ್ವನ ಸಭೆಯಲ್ಲಿ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದಂತೆ ಎಲ್ಲ ಪೊಲೀಸ್ ಠಾಣೆಗಳಿಗೂ ಸಾಂತ್ವನಕ್ಕೆ ಪೂರಕ ಸುತ್ತೋಲೆಯನ್ನು ಕಳುಹಿಸಲಾಗಿದೆ. ಈ ಕಾರ್ಯಾಗಾರದ ಬಳಿಕ ಎಲ್ಲರಿಗೂ ಡಯಲ್ 100 ಬಳಕೆಯ ಬಗ್ಗೆ ಜಾಗೃತಿ ಮೂಡಬೇಕೆಂದು ಆಶಯ ವ್ಯಕ್ತ ಪಡಿಸಿದರು. ಇಲಾಖೆ 24 ಗಂಟೆ ಪಟ್ರೋಲಿಂಗ್ ನಡೆಸುತ್ತಿದ್ದು, ಜನರ ನೆರವಿಗೆ ಇಲಾಖೆ ಸದಾ ಸಿದ್ಧವಿದೆ ಎಂದರು.

ಜಿಲ್ಲೆಯಲ್ಲೂ ಮಾನವ ಸಾಗಾಣಿಕ ಸಮಸ್ಯೆ ಬೇರೂರಿರುವುದು ಇತ್ತೀಚೆಗೆ ವರದಿಯಾದ ಪ್ರಕರಣದಿಂದ ಬೆಳಕಿಗೆ ಬಂದಿದ್ದು, ಸಮಸ್ಯೆ ಬಗ್ಗೆ ಇಲಾಖೆ ಜಾಗೃತವಾಗಿದೆ. ಕಚೇರಿಗಳಲ್ಲಿ ಲೈಂಗಿಕ ದೌರ್ಜನ್ಯಗಳ ಬಗ್ಗೆಯೂ, ್ರೂಣಹತ್ಯೆ ಬಗ್ಗೆಯೂ ಈ ಕಾರ್ಯಾಗಾರದಿಂದ ಅರಿವು ಮೂಡಲಿ ಎಂದು ಎಸ್‌ಪಿ ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಮಾತನಾಡಿದರು. ಅಡಿಶನಲ್ ಎಸ್ಪಿ ಕುಮಾರ್‌ಚಂದ್ರ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿಗೊನ್ಸಾಲ್ವೀಸ್ ಸ್ವಾಗತಿಸಿದರು. ಸಿಡಿಪಿಒ ವೀಣಾ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಮಾತನಾಡಿದರು. ಅಡಿಶನಲ್ ಎಸ್ಪಿ ಕುಮಾರ್‌ಚಂದ್ರ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿಗೊನ್ಸಾಲ್ವೀಸ್ ಸ್ವಾಗತಿಸಿದರು. ಸಿಡಿಪಿಒ ವೀಣಾ ಕಾರ್ಯಕ್ರಮ ನಿರೂಪಿಸಿದರು.

ನೊಂದ ಮಹಿಳೆಯರಿಗೆ ಸಾಂತ್ವನ ಯೋಜನೆಯಡಿ ಒದಗಿಸಲಾಗುವ ಸೌಲ್ಯಗಳ ಕುರಿತು ಬೆಳಗಾವಿ ಜಿಲ್ಲೆಯ ಮಹಿಳಾ ಕಲ್ಯಾಣ ಸಂಸ್ಥೆಯ ಯೋಜನಾ ನಿರ್ದೇಶಕಿ ಸುರೇಖಾ ಪಾಟೀಲ್ ಮಾಹಿತಿ ನೀಡಿದರು. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಹಾಗೂ ಸಂರಕ್ಷಣಾಧಿಕಾರಿಗಳ ಕರ್ತವ್ಯಗಳ ಕುರಿತು ನಿವೃತ್ತ ಸಂರಕ್ಷಣಾಧಿಕಾರಿ ರಮಾ ದೇವಿ ಮತ್ತು ಬಾಲ್ಯವಿವಾಹ ನಿಷೇದ ಕಾಯ್ದೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆ ಜಿಲ್ಲಾ, ತಾಲೂಕು, ಗ್ರಾಮ ಮಟ್ಟದ ಸಮಿತಿಗಳ ಕರ್ತವ್ಯಗಳು ಕುರಿತು ತುಮಕೂರು ಜಿಲ್ಲೆ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News