ಯುವಕ ನಾಪತ್ತೆ
Update: 2017-10-31 20:40 IST
ಉಡುಪಿ, ಅ.31: ಶಿರ್ವ ಗ್ರಾಮದ ಶಿರ್ವಾ ಬಿಲಾಲ್ ಮಸೀದಿಯ ಬಳಿ ಇರುವ ಅಬ್ದುಲ್ ಮಲ್ಲಿಕ್ ಎಂಬವರು ಮನೆಯಿಂದ ಉಡುಪಿಗೆ ಕೆಲಸಕ್ಕೆಂದು ಹೋದವರು ಈವರೆಗೆ ವಾಪಾಸು ಬಾರದೆ ಕಾಣೆಯಾಗಿದ್ದು, ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರರಣ ದಾಖಲಾಗಿ ತನಿಖೆಯಲ್ಲಿದೆ.
37 ವರ್ಷ ಪ್ರಾಯದ, 5.7 ಅಡಿ ಉದ್ದ, ಗೋಧಿ ಮೈಬಣ್ಣ, ಕೋಲು ಮುಖ, ದಪ್ಪ ಶರೀರ ಹೊಂದಿರುವ ಕನ್ನಡ, ತುಳು, ಉರ್ದು, ಕೊಂಕಣಿ ಭಾಷೆ ಮಾತನಾಡ ಬಲ್ಲ ಇವರು ನೀಲಿ ಬಣ್ಣದ ಟೀ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.
ಇವರ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕಾರ್ಕಳ ಉಪ ವಿಭಾಗ ದ ಸಹಾಯಕ ಪೊಲೀಸ್ ಅಧೀಕ್ಷಕರ ದೂರವಾಣಿ: 08258-231333, 9480805421, ಕಾಪು ಪೊಲೀಸ್ ವೃತ್ತ ನಿರೀಕ್ಷಕರ ದೂರವಾಣಿ: 0820- 2552133, 9480805431, ಶಿರ್ವಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 0820-2554139, 9480805451ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.