ನ.1: ಕನ್ನಡಕ್ಕಾಗಿ ಪಾದಯಾತ್ರೆ
Update: 2017-10-31 20:41 IST
ಉಡುಪಿ, ಅ.31: ಕನ್ನಡ ನಾಡು ನುಡಿ ಸಂಸ್ಕ್ರತಿಯ ಉಳಿವಿಗಾಗಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.1ರಂದು ಯುವ ಸಾಹಿತಿ, ಸಾಮಾಜಿಕ ಕಾರ್ಯ ಕರ್ತ ತಾರಾನಾಥ್ ಮೇಸ್ತ ಶಿರೂರು ಉಡುಪಿಯಿಂದ ಕುಂದಾಪುರದವರೆಗೆ ವಿನೂತನ ಸಂದೇಶ ಸಾರುವ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಪಾದಯಾತ್ರೆಗೆ ಉಡುಪಿಯ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 7ಗಂಟೆಗೆ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಹಾಗೂ ವಿಶು ಶೆಟ್ಟಿ ಅಂಬಲಪಾಡಿ ಚಾಲನೆ ನೀಡಲಿದ್ದಾರೆ. ಪಾದಯಾತ್ರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಕರಪತ್ರಗಳನ್ನು ಹಂಚಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.