×
Ad

ಯುಪಿಸಿಎಲ್‌ನಿಂದ ತೆಂಕ ಗ್ರಾಪಂ ಕ್ರಿಯಾ ಯೋಜನೆಗೆ ಅನುಮೋದನೆ

Update: 2017-10-31 20:47 IST

ಪಡುಬಿದ್ರೆ, ಅ.31: ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಮೂಹದ ಯುಪಿಸಿಎಲ್ ಸಂಸ್ಥೆಯು ತೆಂಕ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ 2017-18ನೆ ವಾರ್ಷಿಕ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿಗಾಗಿ 85.33ಲಕ್ಷ ರೂ. ಸಿಎಸ್‌ಆರ್ ಅನುದಾನದ ಕ್ರಿಯಾ ಯೋಜನೆಗೆ ಇಂದು ಅನುಮೋದನೆ ನೀಡಿದೆ.

ಗ್ರಾಪಂ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ತೆಂಕ ಗ್ರಾಪಂ ಅಧ್ಯಕ್ಷೆ ಅರುಣಾ ಕುಮಾರಿ ಯುಪಿಸಿಎಲ್ ಕಂಪನಿಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಅವರಿಗೆ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಸ್ತಾಂತರಿಸಿದ್ದು, ಇದೇ ವೇಳೆ ಯುಪಿಸಿಎಲ್‌ನಿಂದ ಧೃಢೀಕರಣ ಪತ್ರವನ್ನು ಗ್ರಾಪಂ ಅಧ್ಯಕ್ಷರಿಗೆ ನೀಡಲಾ ಯಿತು. 2016-17ರಲ್ಲಿ ಯುಪಿಸಿಎಲ್ 3 ವರ್ಷದ ಅವಧಿಗೆ ಒಟ್ಟು 7 ಗ್ರಾಪಂಗಳಿಗೆ 22.73 ಕೋಟಿ ರೂ. ಅನುದಾನವನ್ನು ಗ್ರಾಮೀಣಾಭಿವೃದ್ಧಿಗಾಗಿ ಘೋಷಿಸಿದೆ ಎಂದು ಕಿಶೋರ್ ಆಳ್ವ ತಿಳಿಸಿದರು.

ಯುಪಿಸಿಎಲ್ ಯೋಜನೆಯ ವಿಸ್ತರಣಾ ಘಟಕದ 1,200 ಮೆ.ವ್ಯಾ. ವಿದ್ಯುತ್ ಖರೀದಿಗೆ ರಾಜ್ಯ ಸರಕಾರದೊಂದಿಗೆ ಶೀಘ್ರವೇ ಒಪ್ಪಂದಕ್ಕೆ ಸಹಿಯಾ ಗಲಿದ್ದು, ವಿಸ್ತರಣಾ ಕಾಮಗಾರಿಯನ್ನು 40 ತಿಂಗಳೊಳಗೆ ಪೂರ್ಣಗೊಳಿಸಲಾ ಗುವುದು. ಇದರಿಂದ ಒಟ್ಟು 2,400 ಮೆ.ವ್ಯಾ ವಿದ್ಯುತನ್ನು ರಾಜ್ಯದ ಗ್ರಿಡ್‌ಗೆ ನೀಡಲಾಗುವುದು ಎಂದು ಕಿಶೋರ್ ಆಳ್ವ ತಿಳಿಸಿದರು.

ಸ್ಥಾವರದಿಂದ ಉತ್ಪತ್ತಿಯಾಗುವ ಹಾರುಬೂದಿಯನ್ನು ಬಳಕೆ ಮಾಡಲು ಅದಾನಿ ವತಿಯಿಂದ ಸಿಮೆಂಟ್ ಗ್ರೈಂಡಿಂಗ್ ಘಟಕವನ್ನು ಸ್ಥಾಪಿಸಲಾಗುವುದು. ಅದಾನಿ ಸಮೂಹವು ನೀರು ಶುದ್ಧೀಕರಿಸುವ ಘಟಕವನ್ನು ಸ್ಥಾಪಿಸಲು ಕ್ರಿಯಾ ಯೋಜನೆ ತಯಾರಿಸುತ್ತಿದ್ದು, ಈ ಘಟಕದಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಚಿತ ನೀರು ಪೂರೈಕೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ತೆಂಕ ಗ್ರಾಪಂ ವ್ಯಾಪ್ತಿಗೆ ವಿಸ್ತರಿಸಿರುವ ಅದಾನಿ ಯುಪಿ ಸಿಎಲ್‌ನ ಸಂಚಾರಿ ವೈದ್ಯಕೀಯ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು. ಈ ಸೌಲಭ್ಯವು ಪ್ರತೀ ಶನಿವಾರ ತೆಂಕ ಗ್ರಾಮದ ಕರಾವಳಿ ಫ್ರೆಂಡ್ಸ್ ಕಚೇರಿಯ ವಠಾರದಲ್ಲಿ ಲಭ್ಯವಿದ್ದು, ಉಚಿತ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಲಾಗು ತ್ತದೆ. 

ತೆಂಕ ಗ್ರಾಪಂ ಉಪಾಧ್ಯಕ್ಷ ಕಿಶೋರ್, ಸದಸ್ಯರಾದ ಸಯಿರಾ ಬಾನು, ಪಂಚಾ ಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ, ಯುಪಿಸಿಎಲ್ ಕಂಪನಿಯ ಎಜಿಎಂ ಗಿರೀಶ್ ನಾವಡ, ಹಿರಿಯ ಪ್ರಬಂಧಕ ರವಿ ಜೇರೆ, ಅದಾನಿ ಫೌಂಡೇಶನ್‌ನ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News