×
Ad

ಯುವತಿ ನಾಪತ್ತೆ: ದೂರು

Update: 2017-10-31 23:43 IST

ಮಂಗಳೂರು, ಅ. 31: ಜೋಕಟ್ಟೆಯ ನಿವಾಸಿ ಉಮ್ಮು ಕುಲ್ಸು ಯಾನೆ ಮುನ್ನಿ (21) ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅ.16ರಂದು ಬೆಳಗ್ಗೆ 10 ಗಂಟೆಗೆ ಜೋಕಟ್ಟೆಯ  ಬ್ಯಾಂಕ್‌ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟವರು ಈವರೆಗೂ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದಾರೆ.

ಮನೆಯಿಂದ ತೆರಳುವಾಗ ವೋಟರ್ ಐಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಪುಸ್ತಕ ತೆಗೆದುಕೊಂಡು ಹೋಗಿದ್ದಾರೆ. ನೆರೆಮನೆಯ ಅಸ್ಸಾಂ ರಾಜ್ಯದ ನಿವಾಸಿ ಮಲಿಕ್ ಎಂಬಾತ ವಾಸಿಸುವ ಮನೆಗೆ ಬರುತ್ತಿದ್ದ ನಜರುಲ್ಲಾ ಎಂಬಾತ ಕೂಡ ಕಾಣೆಯಾಗಿದ್ದು, ಆತನೊಂದಿಗೆ ತೆರಳಿರಬೇಕೆಂದು ಆಕೆಯ ತಂದೆ ಪಣಂಬೂರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸಪೂರ ಶರೀರ, ಗೋಧಿ ಮೈಬಣ್ಣ, ಉದ್ದ ಕೈಯ ಹಸಿರು ಬಣ್ಣದ ಚೂಡಿದಾರ್, ಕಪ್ಪು ಬಿಳಿ ಮಿಶ್ರಿತ ಕೂದಲು ಹೊಂದಿದ್ದು, ಕನ್ನಡ, ಹಿಂದಿ, ಮಲಯಾಳಿ, ಬ್ಯಾರಿ, ತುಳು ಭಾಷೆ ಬಲ್ಲವರಾಗಿದ್ದಾರೆ. ಈಕೆಯ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಪಣಂಬೂರು ಪೊಲೀಸ್ ಠಾಣೆ 0824-2220530 ಅಥವಾ ಪೊಲೀಸ್ ಕಂಟ್ರೋಲ್ ರೂಂ 0824-2220800 ಅಥವಾ 0824-2220100 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪಣಂಬೂರು ಪೊಲೀಸರು ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News