×
Ad

ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನವಿರಬೇಕು- ರವೀಂದ್ರ ರೈ

Update: 2017-11-01 20:03 IST

ಕೊಣಾಜೆ, ನ. 1: ನಮ್ಮ ನಾಡಿನ ಬಗ್ಗೆ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಅರಿವಿದ್ದರೆ ಮಾತ್ರ ಸಾಲದು ಅಭಿಮಾನದೊಂದಿಗೆ ದೈನಂದಿನ ಜೀವನ ಶೈಲಿಯಲ್ಲಿಯೂ ಅಳವಡಿಸಿಕೊಳ್ಳುವುದು ಬಹಳ ಮುಖ್ಯ ವಾದ ಕಾರ್ಯವಾಗಿದೆ ಎಂದು ಹರೇಕಳ ರಾಮಕೃಷ್ಣ ಪ್ರೌಡಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈಅವರು ಹೇಳಿದರು.

ಅವರು ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 ಪ್ರಾಮುಖ್ಯವಾಗಿ ವಿಧ್ಯಾರ್ಥಿಗಳು ಕನ್ನಡವನ್ನು ಸ್ಪಷ್ಟವಾದ ಉಚ್ಚಾರದೊಂದಿಗೆ, ಇನ್ನಿತರ ಭಾಷೆಗಳನ್ನು ಬೆರೆಸದೇ ನಿರರ್ಗವಾಗಿ ಮಾತನಾಡಲು ಕಲಿತರೆ ಮುಂದಿನ ತಲೆಮಾರಿಗೂ ನಾವು ಸ್ಪಷ್ಟ ಕನ್ನಡವನ್ನು ದಾಟಿಸಲು ಸಾಧ್ಯ ಎಂದು ಹೇಳಿದರು.

ಕನ್ನಡ ಭಾಷಾ ಶಿಕ್ಷಕಿ ಉಷಾಲತ ರವರು ಕರ್ನಾಟಕ ಇತಿಹಾಸ ಮತ್ತು ಬೆಳೆದು ಬಂದ ರೀತಿ ಅದರೊಂದಿಗೆ ಶ್ರೇಷ್ಟತೆಗಳ ಬಗ್ಗೆ ಮಾಹಿತಿ ನೀಡಿದರು. ಸೌಂದರ್ಯ ಮತ್ತು ಬಳಗ ನಿತ್ಯೋತ್ಸವ ಹಾಡನ್ನು ಹಾಡಿದರು. ವಿದ್ಯಾರ್ಥಿಗಳಾದ ಶರಣ್ಯ, ಕೃತಿಕಾ, ರಶ್ವೀನ ಭಾಷಣಗೈದರು. ನಿರೀಕ್ಷಾ ಮತ್ತು ಬಳಗ ದೇಶ ಭಕ್ತಿಗೀತೆಯನ್ನು ಹಾಡಿದರು. ಅಧ್ಯಾಪಕರದ ರವಿಶಂಕರ್‌ರವರು ಕನ್ನಡ ಹಿರಿಮೆಗೆ ಸಂಬಂಧಿಸಿದ ಭಾವಗೀತೆಯನ್ನು ಹಾಡಿದರು. ಶಿಕ್ಷಕರುಗಳಾದ ಕುಮುದ, ಕೃಷ್ಣಶಾಸ್ತ್ರಿ, ಶಿವಕುಮಾರ್, ನೂತನ, ಸ್ಮಿತಾಕುಮಾರಿ ಹಾಗೂ ವಿದ್ಯಾರ್ಥಿ ಸಂಘದ ನಾಯಕಿಯಾದ ತಸ್ಪಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಮೋಹಿನಿ ಧನ್ಯವಾದ ವಿತ್ತರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News