ಬಂಟ್ವಾಳ: ನಿವೃತ್ತ ಎಎಸ್ಸೈಗೆ ಬೀಳ್ಕೊಡುಗೆ ಕಾರ್ಯಕ್ರಮ
Update: 2017-11-01 20:16 IST
ಬಂಟ್ವಾಳ, ನ. 1: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಿವೃತ್ತಿ ಹೊಂದಿದ ಎಎಸ್ಸೈ ಬಾಸ್ಕರ್ ಅವರ ವಿದಾಯ ಸಮಾರಂಭ ಮತ್ತು ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡಿರುವ ಎಎಸ್ಸೈಗಳ ಬೀಳ್ಕೊಡುಗೆ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ನಡೆಯಿತು.
ಇದೇ ಸಂದರ್ಭದಲ್ಲಿ ಎಸ್ಸೈಗಳಾದ ರಕ್ಷಿತ್ ಗೌಡ, ಉಮೇಶ್ ಮತ್ತು ಎಎಸ್ಸೈ ರುಕ್ಮಯ ಗೌಡ, ಎಚ್‌ಸಿಗಳಾದ ರಾಮಯ್ಯ ಗೌಡ, ಇಬ್ರಾಹಿಂ, ಚಂದ್ರಶೇಖರ, ಸುರೇಶ್, ಸೀತಾರಾಮ್ ಗೌಡ, ಶೈಲೇಶ್ ಹಾಗೂ ಪಿಸಿಗಳಾದ ಜಗದೀಶ, ಪ್ರವೀಣ,ಸುನೀತಾ, ರಮೇಶ್ ನಾಯ್ಕ ಅವರನ್ನು ಬೀಳ್ಕೋಡಲಾಯಿತು.
ವೇದಿಕೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುರೇಂದ್ರ ನಾಯಕ್, ಸೇವಾಂಜಲಿ ಪ್ರತಿಷ್ಠಾನದ ಕೃಷ್ಣ ಕುಮಾರ್ ಪೂಂಜಾ, ನಗರ ಠಾಣಾ ಎಸ್ಸೈ ಚಂದ್ರಶೇಖರ್, ವಿಟ್ಲ ಎಸ್ಸೈ ಠಾಣೆಯ ನಾಗರಾಜ್, ಸಂಚಾರ ಠಾಣೆಯ ಎಸ್ಸೈ ಯಲ್ಲಪ್ಪ, ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ, ಬಂಟ್ವಾಳ ವೃತ್ತದ ಪೋಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.