ಉಡುಪಿ: ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ
ಉಡುಪಿ, ನ.1: ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಉಡುಪಿ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆಯೋಜಿಸಲಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು.
ಇಂದಿರಾ ಗಾಂಧಿ 20 ಅಂಶದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ಸಮಾಜದ ಎಲ್ಲಾ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸಿದ ಧೀಮಂತ ಮಹಿಳೆ. ಉಳುವವನೇ ಹೊಲದೊಡೆಯ ಭೂ ಮಸೂದೆಯನ್ನು ತಂದು, ಕೃಷಿಕರಿಗೆ ಭೂ ಮಾಲಕತ್ವವನ್ನು ನೀಡಿದರು. ಅಲ್ಲದೆ ವಸತಿ ರಹಿತರಿಗೆ 5 ಸೆಂಟ್ಸ್, 3 ಸೆಂಟ್ಸ್ ಭೂಮಿ ನೀಡಿದ ಬಡವರ ಕಣ್ಮಣಿ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ದಿನೇಶ್ ಪುತ್ರನ್, ಭಾಸ್ಕರ್ ರಾವ್ ಕಿದಿಯೂರು, ಪ್ರಶಾಂತ್ ಪೂಜಾರಿ, ಮನೋಜ್ ಕರ್ಕೆರ, ಸುಜಯ ಪೂಜಾರಿ, ಸತೀಶ್ ಕೊಡವೂರು, ಲಿಡ್ವಿನ್ ಪಿಂಟೋ, ಶಾಲಿನಿ ಪುರಂದರ್, ಆಕಾಶ್ ರಾವ್, ಗಣಪತಿ ಶೆಟ್ಟಿಗಾರ್, ರಫೀಕ್, ಮುನಾಫ್ ಉಪಸ್ಥಿತರಿದ್ದರು. ಮಹಿಳಾ ಬ್ಲಾಕ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ ಸ್ವಾಗತಿಸಿ, ಜ್ಯೋತಿ ಹೆಬ್ಬಾರ್ ವಂದಿಸಿದರು.