ಪಡುಕೆರೆಯಲ್ಲಿ ಸಾಹಸ ಕ್ರೀಡೆಗಳಿಗೆ ತರಬೇತಿ: ಸಚಿವ ಪ್ರಮೋದ್
ಮಲ್ಪೆ, ನ.1: ಮಲ್ಪೆಯನ್ನು ಕೇಂದ್ರವಾಗಿರಿಸಿಕೊಂಡುಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತಿದ್ದು, ಅತೀ ಶೀಘ್ರವೇ ಇವುಗಳು ಕಾರ್ಯರೂಪಕ್ಕೆ ಬರಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಮ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮಲ್ಪೆ ಕಡಲತೀರದ ದಕ್ಷಿಣ ಭಾಗದಲ್ಲಿರುವ ಪ್ರವಾಸಿ ಬೋಟ್ ಜೆಟ್ಟಿಯ ಸಮೀಪದ ಹಿನ್ನೀರಿನಲ್ಲಿ ಸುಮಾರು 53.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ‘ಸೀ ವಾಕ್ ವೇ ಪಾಯಿಂಟ್’ಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತಿದ್ದರು. ಇದೇ ಸಂದರ್ಭದಲ್ಲಿ ಅವರು ಒಟ್ಟು 1.12 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಿದರು.
ಇಲ್ಲಿ ನಿರ್ಮಾಣಗೊಳ್ಳುವ ಸೀ ವಾಕ್ ವೇ ಪಾಯಿಂಟ್‌ನಿಂದ ಜನರಿಗೆ ಸಮುದ್ರದ ಮೇಲೆ ನಡೆಯುವ ವಿಶಿಷ್ಟ ಅನುಭವ ದೊರಕಲಿದೆ. ದೇಶದಲ್ಲಿ ಕೇರಳದಲ್ಲಿ ಮಾತ್ರ ಇಂಥ ವಾಕ್ ವೇ ಇದ್ದು, ಇಲ್ಲಿಗೆ ಬರುವುದರಿಂದ ನಿಮ್ಮೆಲ್ಲಾ ದೈನಂದಿನ ಒತ್ತಡ, ಉದ್ವಿಗ್ನತೆಯಿಂದ ಬಿಡುಗಡೆ ಪಡೆಯಲು ಸಾಧ್ಯವಿದೆ. ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ.ರೇಜೊ ಅವರು ವಾಕ್‌ವೇ ನಿಮಿರ್ಸುವ ಸಲಹೆ ನೀಡಿದ್ದರು ಎಂದರು.
ಇಲ್ಲಿ ನಿರ್ಮಾಣಗೊಳ್ಳುವ ಸೀ ವಾಕ್ ವೇ ಪಾಯಿಂಟ್‌ನಿಂದ ಜನರಿಗೆ ಸಮುದ್ರದ ಮೇಲೆ ನಡೆಯುವ ವಿಶಿಷ್ಟ ಅನುವದೊರಕಲಿದೆ.ದೇಶದಲ್ಲಿಕೇರಳದಲ್ಲಿಮಾತ್ರಇಂಥವಾಕ್‌ವೇಇದ್ದು,ಇಲ್ಲಿಗೆಬರುವುದರಿಂದನಿಮ್ಮೆಲ್ಲಾದೈನಂದಿನಒತ್ತಡ,ಉದ್ವಿಗ್ನತೆಯಿಂದಬಿಡುಗಡೆಪಡೆಯಲುಸ್ಯಾವಿದೆ. ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ.ರೇಜೊ ಅವರು ವಾಕ್‌ವೇ ನಿರ್ಮಿಸುವ ಸಲಹೆ ನೀಡಿದ್ದರು ಎಂದರು. ಡಿಸೆಂಬರ್ ಕೊನೆಯೊಳಗೆ ಇದರ ಕಾಮಗಾರಿ ಮುಗಿಯಲಿದ್ದು, ಜ.1ರಂದು ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಆಗ ಇದು ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳವಾಗಲಿದೆ ಎಂದು ಸಚಿವರು ಹೇಳಿದರು.
ಮಲ್ಪೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ ಮಲ್ಪೆ ಬೀಚ್ ಅಭಿವೃದ್ದಿ ಸಮಿತಿ ಮೂಲಕ 1.12 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಎಲ್ಲಾ ಕಾಮಗಾರಿ ಗಳು ಡಿಸೆಂಬರ್ ಕೊನೆಯೊಳಗೆ ಮುಗಿಯಲಿದ್ದು, ಹೊಸ ವರ್ಷದಂದು ಉದ್ಘಾಟನೆಗೊಳ್ಳಲಿದೆ ಎಂದರು.
17 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪಡುಕೆರೆ ಸೇತುವೆಯಿಂದಾಗಿ ದ್ವೀಪದಂತಿದ್ದ ಪಡುಕೆರೆಯನ್ನು ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಸಲು ಸಾಧ್ಯವಾಗಲಿದೆ. ಪಡುಕೆರೆ ಸೇತುವೆಯಿಂದ ಅಲ್ಲಿನ ಶಾಂತಿನಗರ ಬೀಚ್‌ವರೆಗೆ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಅಲ್ಲದೇ ಶಾಂತಿನಗರ ಬೀಚ್‌ನಲ್ಲಿ ಪ್ರವಾಸಿಗ ರಿಗಾಗಿ ಹಟ್‌ಗಳ ನಿರ್ಮಾಣ, ಶೌಚಾಲಯ ನಿರ್ಮಾಣ ಹಾಗೂ ಇತರ ಮೂಲಭೂತ ಸೌಕರ್ಯಗಳಿಗಾಗಿ 75 ಲಕ್ಷ ರೂ. ಈಗಾಗಲೇ ಬಿಡುಗಡೆ ಯಾಗಿದೆ.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ಪಡುಕೆರೆ ಬೀಚ್‌ನಲ್ಲಿ ಸಾಹಸ ಕ್ರೀಡೆಗಳಿಗೆ ತರಬೇತಿ ನೀಡಲು 2 ಎಕರೆ ಜಮೀನನ್ನು ಮೀಸಲಿಟ್ಟಿದ್ದು, ಇದನ್ನು ಜೆತ್ನಾ ವತಿಯಿಂದ ಅಭಿವೃದ್ದಿಪಡಿಸಲಾಗುವುದು ಎಂದು ಸಚಿವರು ನುಡಿದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ಪಡುಕೆರೆ ಬೀಚ್‌ನಲ್ಲಿ ಸಾಹಸ ಕ್ರೀಡೆಗಳಿಗೆ ತರಬೇತಿ ನೀಡಲು 2 ಎಕರೆ ಜಮೀನನ್ನು ಮೀಸಲಿಟ್ಟಿದ್ದು, ಇದನ್ನು ಜೆತ್ನಾ ವತಿಯಿಂದ ಅಭಿವೃದ್ದಿಪಡಿಸಲಾಗುವುದು ಎಂದು ಸಚಿವರು ನುಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಗಣೇಶ್ ನೇರ್ಗಿ, ನಾರಾಯಣ ಕುಂದರ್, ವಿಜಯ ಕುಂದರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಸತೀಶ್‌ಅಮೀನ್ ಪಡುಕೆರೆ ಉಪಸ್ಥಿತರಿದ್ದರು.
ನಗರಸಭೆಯ ಪೌರಾಯುಕ್ತ ಮಂಜುನಾಥಯ್ಯ ಸ್ವಾಗತಿಸಿ, ವಂದಿಸಿದರು.