×
Ad

ಉತ್ತರ ಕೊರಿಯದೊಂದಿಗೆ ನೇರ ರಾಜತಾಂತ್ರಿಕ ಸಂಬಂಧ: ಅಮೆರಿಕದ ಅಧಿಕಾರಿ ಇಂಗಿತ

Update: 2017-11-01 21:57 IST

ವಾಶಿಂಗ್ಟನ್, ನ. 1: ಉತ್ತರ ಕೊರಿಯದೊಂದಿಗೆ ಮಾತುಕತೆ ನಡೆಸುವುದು ಸಮಯ ವ್ಯರ್ಥ ಮಾಡಿದಂತೆ ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರ್ವಜನಿಕವಾಗಿ ಹೇಳಿದರೂ, ಅವರ ದೇಶವು ಉತ್ತರ ಕೊರಿಯದೊಂದಿಗೆ ನೇರ ರಾಜತಾಂತ್ರಿಕ ಸಂಪರ್ಕಗಳನ್ನು ಹೊಂದಿದೆ.

ಈ ರಾಜತಾಂತ್ರಿಕ ಮಾರ್ಗದ ಮೂಲಕ, ಉತ್ತರ ಕೊರಿಯದೊಂದಿಗಿನ ಅಮೆರಿಕದ ಸಂಧಾನಕಾರ ಜೋಸೆಫ್ ಯುನ್, ಉತ್ತರ ಕೊರಿಯದ ವಿಶ್ವಸಂಸ್ಥೆ ನಿಯೋಗದಲ್ಲಿರುವ ರಾಜತಾಂತ್ರಿಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಟ್ರಂಪ್ ಮತ್ತು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ನಡುವೆ ಕೋಪೋದ್ರಿಕ್ತ ಮಾತುಗಳ ವಿನಿಮಯದ ಹಿನ್ನೆಲೆಯಲ್ಲಿ, ಉಭಯ ದೇಶಗಳ ರಾಜತಾಂತ್ರಿಕರ ನಡುವಿನ ಸಂಪರ್ಕ ಮಹತ್ವ ಪಡೆದುಕೊಂಡಿದೆ.

‘‘ಮೊದಲ ಬಾಂಬ್ ಬೀಳುವವರೆಗೂ ನಾನು ರಾಜತಾಂತ್ರಿಕ ಮಾತುಕತೆಗಳನ್ನು ಮುಂದುವರಿಸುತ್ತೇನೆ’’ ಎಂಬುದಾಗಿ ಅಕ್ಟೋಬರ್ 17ರಂದು ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಹೇಳಿದ್ದರು.

ನೇರ ಮಾತುಕತೆಗಳನ್ನು ಟ್ರಂಪ್ ನಿರಾಕರಿಸಿದ್ದರೂ, ಅಮೆರಿಕನ್ ಕೈದಿಗಳ ಬಿಡುಗಡೆಗೂ ಮೀರಿ ಅಮೆರಿಕವು ಉತ್ತರ ಕೊರಿಯದೊಂದಿಗೆ ನೇರ ಮಾತುಕತೆಗಳಲ್ಲಿ ತೊಡಗಿದೆ ಎಂಬ ಸ್ಪಷ್ಟ ಸೂಚನೆಯನ್ನು ಈ ಅಧಿಕಾರಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News