ಮುಖ್ಯಮಂತ್ರಿಗೆ ಅವಮಾನ ಪೊಲೀಸ್ ಪೇದೆ ವಿರುದ್ದ ದೂರು
ಬೆಳ್ತಂಗಡಿ, ನ.1: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಾಮಾಜಿಕ ತಾಲಾಜಾಣದಲ್ಲಿ ಬೆಳ್ತಂಗಡಿ ಪೊಲೀಸ್ ಪೇದೆ ರಾಜಪ್ಪ ಶಿವಪ್ಪ ಬೆಣ್ಣೆ 'ನೋಡಿ ನಮ್ಮ ಸಿದ್ದು ಖಾನ್ ಹೇಳ್ತಾರೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಆದರೆ ಮೈಲಾರಿಯನ್ನು ಕಂಡಾಗ ಸಿಡುಕಿದ ಮುಖ ಮುಲ್ಲಾನನ್ನು ಕಂಡಾಗ ಅರಳಿದ ಮುಖ, ಮೀನು ತಿಂದು ಹಲ್ಲಿಗೆ ಕಡ್ಡಿ ಹಾಕುತ್ತಾ ದೇವಸ್ಥಾನಕ್ಕೆ ಹೋಗುವುದು ಒಂದು ಸಂಸ್ಕೃತಿ, ಕೋಟ್ಯಾಂತ ಹಿಂದೂ ಜನ ಆರಾಧಿಸುವ ನಾಡಿನ ಪ್ರಮುಖ ದೇವಸ್ಥಾನವನ್ನು ಮಾಂಸದ ಊಟ ಸೇವಿಸಿ ದೇವರ ದರ್ಶನ ಮಾಡಿದ ಮುಖ್ಯಮಂತ್ರಿ' ಎಂದು ಚಿತ್ರ ಸಹಿತ ಬರೆದಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ಯುವ ಕಾಂಗ್ರೆಸ್ ಬುಧವಾರ ಬೆಳ್ತಂಗಡಿ ಠಾಣೆಗೆ ದೂರು ನೀಡಿದೆ.
ಇದು ಕೋಮುಗಲಭೆಗೆ ಪ್ರೇರೇಪಿಸುವ ಕೆಲಸವಾಗಿದ್ದು, ಕೂಡಲೇ ಪೊಲೀಸ್ ಪೇದೆ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗೆ, ಗ್ರಹ ಸಚಿವರಿಗೆ, ಪೊಲೀಸ್ ಮಹಾನಿರ್ದೇಶಕರಿಗೆ, ಸೈಬರ್ ಕ್ರೈಂ ಬ್ರಾಂಚ್ ಪೊಲೀಸ್ ಮಹಾನಿರ್ದೇಶಕರಿಗೆ, ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಬಂಟ್ವಾಳ ಉಪವಿಭಾಗ ಉಪ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಬೆಳ್ತಂಗಡಿ ವೃತ್ತ ನಿರೀಕ್ಷಕರಿಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.