×
Ad

ಕಾಳು ಮೆಣಸು ಕಳವು ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

Update: 2017-11-01 23:08 IST

ಪುತ್ತೂರು, ನ. 1: ಪಾಣಾಜೆ ಗ್ರಾಮದ ಆರ್ಲಪದವು ಎಂಬಲ್ಲಿ ಅಂಗಡಿಯಲ್ಲಿ ದಾಸ್ತಾನಿರಿಸಿದ್ದ ಕಾಳುಮೆಣಸು ಕಳವು ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಸಂಪ್ಯ ಪೊಲೀಸರು  ಬಂಧಿಸಿ ಕಾಳು ಮೆಣಸು ಸಹಿತ 4.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಉಕ್ಕುಡ ನಿವಾಸಿಗಳಾದ ಇರ್ಷಾದ್ ಹಾಗೂ ಹಕೀಂ ಬಂಧಿತ ಆರೋಪಿಗಳು. ಆರೋಪಿಗಳು 110 ಕಿಲೋ ಕಾಳುಮೆಣಸನ್ನು ಮಾರಾಟ ಮಾಡುವ ಉದ್ದೇಶದಿಂದ ಈಚರ್ ವಾಹನದಲ್ಲಿ ಸಾಗಾಟ ನಡೆಸುತ್ತಿದ್ದ ಕುರಿತು ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಸಂಪ್ಯ ಪೊಲೀಸರು ಬುಧವಾರ ಪುತ್ತೂರಿನ ಬೈಪಾಸ್ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರ್ಲಪದವುನಲ್ಲಿ ಅಂಗಡಿ ಹೊಂದಿರುವ ಕರೀಂ ಅವರ ಅಂಗಡಿಯಿಂದ 10 ಕ್ವಿಂಟ್ವಾಲ್ ಮೆಣಸು ಕಳವು ನಡೆದಿತ್ತು. ಪ್ರಕರಣಕ್ಕೆ ಸಂಬಂಸಿದಂತೆ 8 ಮಂದಿ ಆರೋಪಿಗಳನ್ನು ಗುರುತಿಸಲಾಗಿತ್ತು. ಈ ಪೈಕಿ ಈಗಾಗಲೇ 4 ಮಂದಿಯ  ಬಂಧನವಾಗಿತ್ತು . ಉಳಿದಿಬ್ಬರು ಆರೋಪಿಗಳನ್ನು ಇದೀಗ ಬಂಧಿಸಲಾಗಿದ್ದು, ಆರೋಪಿಗಳ ವಶದಲ್ಲಿದ್ದ 110 ಕೆಜಿ ಕಾಳುಮೆಣಸು ಮತ್ತು ಅದರ ಸಾಗಾಟಕ್ಕೆ ಬಳಸಿದ ಈಚರ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News