×
Ad

ಹೃದಯದ ಭಾಷೆಯನ್ನು ಪ್ರೀತಿಸಿ: ಆನಂದ್ ಸಿ.ಕುಂದರ್

Update: 2017-11-02 21:42 IST

ಬಾರ್ಕೂರು, ನ.2: ನಮಗೆ ಇಂಗ್ಲೀಷ್ ಬೇಕು. ಆದರೆ ಮಾತೃಭಾಷೆಯನ್ನು ಬಿಡಬಾರದು. ಹೃದಯದಿಂದ ಆಡುವ ಬರುವ ಬಾಷೆಯನ್ನು ಪ್ರೀತಿಸಿ ಉಳಿಸಿ ಬೆಳೆಸುವತತಿ ನಮ್ಮ ಕಾರ್ಯವಾಗಬೇಕು ಎಂದು ಕೋಟ ಮಣೂರಿನ ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಹೇಳಿದರು.

ಬಾರಕೂರಿನ ವಿದ್ಯೇಶ ವಿದ್ಯಾಮಾನ್ಯ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿ ವತಿಯಿಂದ ನಡೆಯುವ ತಿಂಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡು ತಿದ್ದರು. ಇದರಡಿಯಲ್ಲಿ ನವೆಂಬರ್ ಪೂರ್ತಿ ತಿಂಗಳ 30 ದಿನವೂ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ವೈವಿದ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುವುದು.

ಇದೇ ಸಂದರ್ಭದಲ್ಲಿ ಅಧ್ಯಾಪಕ ವಡ್ಡರ್ಸೆ ಪ್ರಕಾಶ್ ಆಚಾರ್ಯ ಅವರ ಭಾವ ನಿನಾದ ಭಾವಗೀತೆಗಳ ಧ್ವನಿಮುದ್ರಿತ ಸಿಡಿಯ ಬಿಡುಗಡೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವೂ ಉದ್ಘಾಟನೆಗೊಂಡಿತು.

ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಅಧ್ಯಾಪಕ ವಡ್ಡರ್ಸೆ ಪ್ರಕಾಶ ಆಚಾರ್ಯ ಅವರ ಭಾವ ನಿನಾದ ಭಾವಗೀತೆಗಳ ಧ್ವನಿಮುದ್ರಿತ ಸಿಡಿ ಬಿಡುಗಡೆ ಮಾಡಿದರು. ಬಾರ್ಕೂರು ವಿದ್ಯಾಭಿವರ್ಧಿನಿ ಸಂಘದ ಅಧ್ಯಕ್ಷ ಬಿ.ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಸಂಚಾಲಕ ಡಾ.ಬಿ.ಮಂಜುನಾಥ ಸೋಮಯಾಜಿ, ಕಸಾಪದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕಾರ್ಯದರ್ಶಿ ನಾರಾಯಣ ಮಡಿ, ಬಾರ್ಕೂರು ರೊಟರಿ ಕ್ಲಬ್ ಅಧ್ಯಕ್ಷ ರಾಜು ಟಿ ಪೂಜಾರಿ, ಬಾರ್ಕೂರು ವಿದ್ಯಾಭಿವರ್ಧಿನಿ ಸಂಘದ ಕಾರ್ಯದರ್ಶಿ ಬಿ.ಸೀತಾರಾಮ ಶೆಟ್ಟಿ, ರೋಟರಿ ಕ್ಲಬ್‌ನ ಸತೀಶ್ ಅಮೀನ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದರ್ಶನ ಉಡುಪ, ಕೋಟೇಶ್ವರ ರೋಟರಿ ಕ್ಲಬ್ ಕಾರ್ಯದರ್ಶಿ ಸತೀಶ್ ಆಚಾರ್ಯ, ಸಾಹಿತ್ಯ ಸಂಘದ ಅಧ್ಯಕ್ಷ ಜೋಯಲ್ ಡೇಸಾ, ಬಾರ್ಕೂರು ಕಾಳಿಕಾಂಭ ದೇವಸ್ಥಾನದ ಆಡಳಿತ ಮೊಕ್ತೇಸರ ವಡೇರಹೋಬಳಿ ಶ್ರೀಧರ ಆಚಾರ್ಯ ಉಪಸ್ಥಿತರಿದ್ದರು.

ಶಾಲೆಯ ಪ್ರಾಂಶುಪಾಲೆ ಪ್ರೀತಿ ರೇಖಾ ಸ್ವಾಗತಿಸಿ ವಡ್ಡರ್ಸೆ ಪ್ರಕಾಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಸುಜಾತ ಎಲ್ ರೈ ವಂದಿಸಿದರು. ಕಸಾಪದ ಕೋಟ ಹೋಬಳಿ ಅಧ್ಯಕ್ಷ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಗಾಯಕರಾದ ಬಿ.ಕೃಷ್ಣ ಕಾರಂತ, ಉಪ್ಪೂರು ಭಾಗ್ಯಲಕ್ಷ್ಮೀ, ಸುರೇಶ್ ಸಾಲಿಗ್ರಾಮ ಭಾವಗೀತೆಗಳನ್ನು ಹಾಡಿ ರಂಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News