×
Ad

ಮಹಿಳೆಯರೂ ಕ್ರಿಕೆಟ್‌ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿ: ಡಾ.ಎಚ್.ಎಸ್.ಬಲ್ಲಾಳ್

Update: 2017-11-02 22:18 IST

ಉಡುಪಿ, ನ.2: ಮಹಿಳೆಯರೂ ಕ್ರಿಕೆಟ್ ಆಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಆಟವನ್ನು ವೃತ್ತಿ-ಪ್ರವೃತ್ತಿಯನ್ನಾಗಿಸಿಕೊಳ್ಳುವ ಕಾಲಘಟ್ಟ ಬಂದಿದೆ ಎಂದು ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್.ಬಲ್ಲಾಳ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆಯುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ಮಹಿಳಾ ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಮಣಿಪಾಲ ವಿವಿಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಿಗೆ ಆಟದ ಸಮವಸ್ತ್ರವನ್ನು ವಿತರಿಸಿ ಬೀಳ್ಕೊಡುವ ಸಮಾರಂದಲ್ಲಿ ಅವರು ಮಾತನಾಡುತಿದ್ದರು.

ಭಾರತದ ಮಹಿಳಾ ಕ್ರಿಕೆಟ್ ತಂಡ ಈ ಸಲದ ವಿಶ್ವಕಪ್ ಕ್ರಿಕೆಟಿನಲ್ಲಿ ಅತ್ಯುತ್ತಮ ಆಟದ ಪ್ರದರ್ಶನ ನೀಡಿ ಅಂತಿಮ ಪಂದ್ಯದಲ್ಲಿ ವಿರೋಚಿತ ಸೋಲನ್ನು ಕಂಡರೂ ಕೋಟಿಕೋಟಿ ಭಾರತೀಯರ ಮನವನ್ನುಗೆದ್ದುಕೊಂಡು ಮಹಿಳಾ ಕ್ರಿಕೆಟಿಗರಲ್ಲಿ ಹುಮ್ಮಸ್ಸನ್ನು ಮೂಡಿಸಿದೆ ಎಂದರು.

ಮಹಿಳಾ ಕ್ರಿಕೆಟಿನಲ್ಲಿ ಉನ್ನತ ಮಟ್ಟದತ್ತ ಸಾಗಲು ಯುವ ಆಟಗಾರ್ತಿಯರಿಗೆ ಒಳ್ಳೆಯ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಮಹಿಳೆಯರೂ ಕ್ರಿಕೆಟ್ ಆಟವನ್ನು ವೃತ್ತಿ-ಪ್ರವೃತ್ತಿಯನ್ನಾಗಿಸಿಕೊಳ್ಳುವುದು ಅಗತ್ಯ ಎಂದವರು ನುಡಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕ್ರೀಡಾ ಸಮಿತಿಯ ಕಾರ್ಯದರ್ಶಿ ಡಾ.ವಿನೋದ್ ನಾಯಕ್, ಸಹ ಕಾರ್ಯದರ್ಶಿ ಅನಿತಾ ಗುರು ತಂಡದ ವ್ಯವಸ್ಥಾಪಕ ಡಾ.ಉಪೇಂದ್ರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News