ಪ್ರತ್ಯೇಕ ಪ್ರಕರಣ ಮೂವರು ಆತ್ಮಹತ್ಯೆ
ಅಮಾಸೆಬೈಲು, ನ.2: ಪತ್ನಿ ಹಾಗೂ ಮಕ್ಕಳು ಗದ್ದೆ ಕೆಲಸಕ್ಕೆಂದು ಹೋಗಿದ್ದಾಗ ಮನೆಯಲ್ಲಿದ್ದ ಪತಿ, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಅಮಾಸೆಬೈಲು ಗ್ರಾಮದ ಹೊಡ್ಡಹಕ್ಲು ಜಡ್ಡಿನಗದ್ದೆ ಎಂಬಲ್ಲಿ ನಡೆದಿದೆ.
ಮೃತರನ್ನು ಉದಯ ನಾಯ್ಕ ಎಂದು ಗುರುತಿಸಲಾಗಿದೆ. ಇವರ ಪತ್ನಿ ಗೀತಾ ತನ್ನ ಮಕ್ಕಳೊಂದಿಗೆ ಗದ್ದೆ ಕೆಲಸಕ್ಕೆಂದು ಬೆಳಗ್ಗೆ 8 ಗಂಟೆಗೆ ಹೋಗಿದ್ದು, ಅಪರಾಹ್ನ 1:45ಕ್ಕೆ ಹಿಂದಿರುಗಿ ಬಂದು ನೋಡಿದಾಗ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಗುಣವಾಗದ ಕಾಯಿಲೆ ಹಾಗೂ ಕೆಲಸವಿಲ್ಲದ ಚಿಂತೆಯಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ವಡೇರಹೋಬಳಿ ನಿವಾಸಿ ಯೋಗೀಶ್ (48) ಎಂಬವರು ಇಂದು ಅಪರಾಹ್ನ 12ರಿಂದ 12:45ರ ನಡುವಿನ ಅವಧಿಯಲ್ಲಿ ಮಂಗಲಪಾಂಡೆ ರಸ್ತೆಯಲ್ಲಿರುವ ತಾನು ವಾಸವಾಗಿರುವ ಮನೆಯ ಕೋಣೆಗೆ ಹುಕ್ಸ್‌ಗೆ ಶಾಲನ್ನು ಕಟ್ಟಿ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಮಕ್ಕಳಿಲ್ಲದ ಕಾರಣಕ್ಕಾಗಿ ಮಾನಸಿಕವಾಗಿ ನೊಂದು ಖಿನ್ನತೆಗೊಳ ಗಾದ ರೆಂಜಾಳ ಗ್ರಾಮದ ಭಂಡಾರಿಬೆಟ್ಟು ದರ್ಖಾಸ್ತು ಮನೆಯ ಚೀಂಕ್ರ (47) ಎಂಬವರು ವಿಪರೀತ ಸಾರಾಯಿ ಕುಡಿದು ರೆಂಜಾಳ ಗ್ರಾಮದ ಗುಬ್ಬಿ ಹೆಗಡೆಯವರ ಗದ್ದೆ ಬದಿಯಲ್ಲಿ ಮೃತಪಟ್ಟಿದ್ದು, ಅವರ ದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.