ಅಫ್ಘಾನ್ ಟ್ಯಾಂಕರ್‌ಗಳ ಸ್ಫೋಟ: 15 ಸಾವು

Update: 2017-11-02 16:59 GMT

ಚಾರಿಕರ್ (ಅಫ್ಘಾನಿಸ್ತಾನ), ನ. 2: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನ ವಾಯುವ್ಯ ಭಾಗದಲ್ಲಿರುವ ಚಾರಿಕರ್ ಪಟ್ಟಣದಲ್ಲಿ ಬುಧವಾರ ಇಂಧನ ಟ್ಯಾಂಕರ್‌ಗಳು ಸ್ಫೋಟಿಸಿದ್ದು ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಹಾಗೂ 27 ಮಂದಿ ಗಾಯಗೊಂಡಿದ್ದಾರೆ.

ಬಾಂಬೊಂದು ಸ್ಫೋಟಿಸಿದಾಗ ಎರಡು ಇಂಧನ ಟ್ಯಾಂಕರ್‌ಗಳು ಹೊತ್ತಿಕೊಂಡವು. ಆಗ ಸಂಭವಿಸಿದ ಸ್ಫೋಟದಿಂದಾಗಿ ಸಮೀಪದಲ್ಲಿದ್ದ ಬಸ್ಸೊಂದು ಬೆಂಕಿಗಾಹುತಿಯಾಯಿತು. ಬಸ್ಸಿನಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಸ್ಥಳದಲ್ಲೇ ಸುಟ್ಟುಹೋದರು ಎಂದು ಸ್ಥಳೀಯ ಸರಕಾರದ ವಕ್ತಾರೆಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News