‘ಐತಿಹಾಸಿಕ ಸಂಪ್ರದಾಯ’ಗಳನ್ನು ಅನುಸರಿಸಿ: ಭಾರತಕ್ಕೆ ಚೀನಾ ಕರೆ
Update: 2017-11-02 22:30 IST
ಬೀಜಿಂಗ್, ನ. 2: ಭಾರತ ಮತ್ತು ಭೂತಾನ್ ‘ಸಾಮಾನ್ಯ ಸಂಬಂಧ’ವನ್ನು ಹೊಂದುವುದಕ್ಕೆ ತಾನು ಪರವಾಗಿದ್ದೇನೆ ಎಂದು ಚೀನಾ ಗುರುವಾರ ಹೇಳಿದೆ.
ಡೋ ಕಾಲ ಬಿಕ್ಕಟ್ಟಿನ ಸಂದರ್ಭದಲ್ಲಿ ನೀಡಿದ ಬೆಂಬಲಕ್ಕಾಗಿ ಹೊಸದಿಲ್ಲಿಗೆ ಭೇಟಿ ನೀಡಿರುವ ಭೂತಾನ್ ದೊರೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಶ್ಲಾಘಿಸಿದ ಒಂದು ದಿನದ ಬಳಿಕ ಚೀನಾ ಈ ಪ್ರತಿಕ್ರಿಯೆ ನೀಡಿದೆ.
‘ಐತಿಹಾಸಿಕ ಸಂಪ್ರದಾಯ’ಗಳನ್ನು ಅನುಸರಿಸಿ ಹಾಗೂ ಗಡಿಯಲ್ಲಿ ಶಾಂತಿ ಕಾಪಾಡಿ ಎಂಬುದಾಗಿ ಡೋ ಕಾಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾದ ವಿದೇಶ ಸಚಿವಾಲಯ ಭಾರತವನ್ನು ಜ್ಞಾಪಿಸಿದೆ.