ಪಾಕ್‌ನಿಂದ ಬರುವವರ ಹೆಚ್ಚಿನ ತಪಾಸಣೆ ಅಗತ್ಯ: ಅಮೆರಿಕ ಸಂಸದ
Update: 2017-11-02 22:33 IST
ವಾಶಿಂಗ್ಟನ್, ನ. 2: ಪಾಕಿಸ್ತಾನದಲ್ಲಿ ಬೃಹತ್ ಪ್ರಮಾಣದಲ್ಲಿ ಭಯೋತ್ಪಾದಕರ ಉಪಸ್ಥಿತಿಯಿರುವುದರಿಂದ, ಆ ದೇಶದಿಂದ ಅಮೆರಿಕಕ್ಕೆ ಬರುವ ಜನರನ್ನು ‘ಹೆಚ್ಚಿನ ತನಿಖೆಗೊಳಸುವ’ ಅಗತ್ಯವಿದೆ ಎಂದು ಕಾಂಗ್ರೆಸ್ ಸದಸ್ಯ ಪೀಟರ್ ಕಿಂಗ್ ಸಿಎನ್‌ಎನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
‘‘ಭಾರೀ ಸಂಖ್ಯೆಯಲ್ಲಿ ಭಯೋತ್ಪಾದಕರಿರುವ ದೇಶದಿಂದ ಯಾರಾದರು ಬರುವುದಾದರೆ, ಬೇರೆ ದೇಶಗಳಿಂದ ಬರುವವರಿಗಿಂತ ಹೆಚ್ಚಿನ ತಪಾಸಣೆಗೆ ಅವರನ್ನು ಒಳಪಡಿಸಬೇಕು’’ ಎಂದರು.