ಪೇದೆಯನ್ನು ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ
ಬೆಳ್ತಂಗಡಿ, ನ. 2: ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅವಮಾನ ಮತ್ತು ಅಪಮಾನಕಾರಿಯಾಗಿ ಸಾಮಾಜಿಕ ತಾಲಾಜಾಣದಲ್ಲಿ ಚಿತ್ರಿಸಿದ ಬೆಳ್ತಂಗಡಿ ಠಾಣೆಯ ಪೊಲೀಸ್ ಪೇದೆ ರಾಜಪ್ಪ ಶಿವಪ್ಪ ಬೆಣ್ಣೆ ಅವರ ವಿರುದ್ಧ ಇಲಾಖಾ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ನೀಡಿರುವುದಾಗಿ ತಿಳಿದು ಬಂದಿದೆ.
'ನೋಡಿ ನಮ್ಮ ಸಿದ್ದು ಖಾನ್ ಹೇಳ್ತಾರೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಆದರೆ ಮೈಲಾರಿಯನ್ನು ಕಂಡಾಗ ಸಿಡುಕಿದ ಮುಖ ಮುಲ್ಲಾನನ್ನು ಕಂಡಾಗ ಅರಳಿದ ಮುಖ, ಎಂಬಿತ್ಯಾದಿಯಾಗಿ ಮುಖ್ಯಮಂತ್ರಿ ವಿರುದ್ಧ ಚಿತ್ರ ಸಹಿತ ಬರೆದಿದ್ದು ಇದು ಗಲಭೆಗಳಿಗೆ ಪ್ರೇರೇಪಿಸುವ ಕೆಲಸವಾಗಿದ್ದು, ಭಾವನಾತ್ಮಕವಾಗಿ, ಧಾರ್ಮಿಕವಾಗಿ ಕೆರೆಳಿಸುವ ಬರಹವಾಗಿದೆ ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಯುವ ಕಾಂಗ್ರೆಸ್ ಬುಧವಾರ ಬೆಳ್ತಂಗಡಿ ಠಾಣೆಗೆ ದೂರು ನೀಡಿತ್ತು.
ಇದೀಗ ಈ ದೂರನ್ನು ಪರಿಶೀಲಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಇದೀಗ ಪ್ರಕರಣದ ಬಗ್ಗೆ ಇಲಾಖಾ ತನಿಖೆಗೆ ಆದೇಶ ನೀಡಿದ್ದಾರೆ. ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.