ಸಹಾರ ಸಂಘಟನೆಯಿಂದ ಸಾಕ್ಷ್ಯ ಚಿತ್ರ ಬಿಡುಗಡೆ
Update: 2017-11-02 22:55 IST
ಮಂಗಳೂರು, ನ. 2: ಮಂಗಳೂರಿನ ಸಹಾರ ಯುವಸೇವಾ ಸಂಘಟನೆಯು ಸ್ಥಾಪಿತವಾಗಿ ಎರಡು ವರ್ಷ ಪೊರೈಸಿದ ಹಿನ್ನೆಲೆಯಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳನ್ನಾಧಾರಿತ ಕಿರು ಸಾಕ್ಷ್ಯ ಚಿತ್ರ ಬಿಡುಗಡೆ ಕಾರ್ಯಕ್ರಮವು ರೋಶನಿ ನಿಲಯ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
"ಅಕ್ಷರ ಸಂತ" ಹರೇಕಳ ಹಾಜಬ್ಬನವರು ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರುಗಳಾದ ಪ್ರೊ.ಇವ್ಲಿನ್ ಬೆನಿಸ್, ಡಾ.ಸೆಬಾಸ್ಟಿಯನ್ ಕೆ.ವಿ.ಹಾಗೂ ಆಶಾ ಲೋಬೋ ಅವರು ಉಪಸ್ಥಿತರಿದ್ದರು.
ಸಂಘಟನೆಯ ಅಧ್ಯಕ್ಷ ಶೌವಾದ್ ಗೂನಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಶಾಂತಿ ಪ್ರಸಾದ್ ವಂದಿಸಿದರು. ಕಾರ್ಯದರ್ಶಿ ದೀಕ್ಷಾ ಜಿ.ಕೆ.ಕಾರ್ಯಕ್ರಮ ನಿರೂಪಿಸಿದರು.