ಲಾದೆನ್‌ನಿಂದ ವಶಪಡಿಸಿಕೊಂಡ 4.7 ಲಕ್ಷ ಕಡತಗಳ ಬಿಡುಗಡೆ
Update: 2017-11-02 23:14 IST
ವಾಶಿಂಗ್ಟನ್, ನ. 2: 2011ರಲ್ಲಿ ಅಲ್-ಖಾಯಿದಾ ಸ್ಥಾಪಕ ಉಸಾಮ ಬಿನ್ ಲಾದೆನ್‌ನ ಪಾಕಿಸ್ತಾನದಲ್ಲಿರುವ ಅಡಗುದಾಣದ ಮೇಲೆ ಅಮೆರಿಕದ ಸೈನಿಕರು ನಡೆಸಿದ ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ಬೃಹತ್ ಪ್ರಮಾಣದ ದಾಖಲೆಗಳು ಮತ್ತು ಒಂದು ವೀಡಿಯೊವನ್ನು ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ಬುಧವಾರ ಬಿಡುಗಡೆಗೊಳಿಸಿದೆ.
ಅಮೆರಿಕದ ನೇವಿ ಸೀಲ್‌ಗಳು ಅಬೊಟಾಬಾದ್‌ನ ಕಟ್ಟಡವೊಂದರ ಮೇಲೆ ನಡೆಸಿದ ಈ ದಾಳಿಯಲ್ಲಿ ಲಾದನ್ ಹತನಾಗಿದ್ದನು.
2011ರ ಮೇ ತಿಂಗಳಲ್ಲಿ ವಶಪಡಿಸಿಕೊಂಡ 4.7 ಲಕ್ಷ ಕಡತಗಳನ್ನು ಸಿಐಎ ಇಂಟರ್‌ನೆಟ್‌ನಲ್ಲಿ ಬಿಡುಗಡೆಗೊಳಿಸಿದೆ.
ವಶಪಡಿಸಿಕೊಳ್ಳಲಾದ ವಸ್ತುಗಳಲ್ಲಿ ಲಾದನ್‌ನ ಪುತ್ರ ಹಂಝ ಬಿನ್ ಲಾದೆನ್‌ನ ಮದುವೆ ವೀಡಿಯೊ ಕೂಡ ಸೇರಿದೆ.