ನಿಂದನೆ ಆರೋಪ: ಬೆಳ್ತಂಗಡಿ ಪೊಲೀಸ್ ಅಧಿಕಾರಿ ವಿರುದ್ಧ ದೂರು
Update: 2017-11-02 23:22 IST
ಬೆಳ್ತಂಗಡಿ, ನ.2: ಇಲ್ಲಿನ ಠಾಣೆಯ ಪೊಲೀಸ್ ಅಧಿಕಾರಿಯೋರ್ವರು ವಾಹನ ತಪಾಸಣೆಯ ವೇಳೆ ಮಹಿಳೆಯೊಬ್ಬರಿಗೆ ಗೌರವಕ್ಕೆ ದಕ್ಕೆ ಬರುವಂತೆ ನಿಂದಿಸಿ ಅಪಮಾನ ಮಾಡಿರುವುದಾಗಿ ಆರೋಪಿಸಿ ನೊಂದ ಮಹಿಳೆ ಪಶ್ಚಿಮ ವಲಯ ಐಜಿಪಿ ಅವರಿಗೆ ದೂರು ನೀಡಿದ್ದಾರೆ.
ಬೆಳ್ತಂಗಡಿ ಪೇಟೆಯಲ್ಲಿ ಪೊಲೀಸ್ ಅಧಿಕಾರಿ ರವಿ ಅವರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಈ ಸಂದರ್ಭ ವಾಹನವನ್ನು ನಿಲ್ಲಿಸಿ ಅಗತ್ಯ ದಾಖಲೆಗಳನ್ನು ನೀಡಿದರೂ ಅನಗತ್ಯವಾಗಿ ಕಿರುಕುಳ ನೀಡಿದ್ದಾರೆ ಹಾಗೂ ಕೆಟ್ಟ ಮಾತುಗಳಿಂದ ಬೈದು ಅಪಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.