ಪ್ರಧಾನಿಗೆ ಭದ್ರತೆ: ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಪುರಸ್ಕಾರ, ನಗದು ಬಹುಮಾನ ಘೋಷಣೆ
ಬೆಳ್ತಂಗಡಿ, ನ. 3: ಪ್ರಧಾನ ಮಂತ್ರಿ ಧರ್ಮಸ್ಥಳ ಹಾಗೂ ಉಜಿರೆಗೆ ಭೇಟಿ ನೀಡುವ ಕಾರ್ಯಕ್ರಮ ಇದ್ದು ಈ ವೇಳೆ ವ್ಯವಸ್ಥಿತವಾಗಿ ಬಂದೋಬಸ್ತು ರೂಪಿಸಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಉತ್ತಮ ಕರ್ತವ್ಯ ನಿರ್ವಹಿಸಿದ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ ಕದ್ರಿ ಅವರಿಗೆ ಉತ್ತಮ ಸೇವಾ ಪುರಸ್ಕಾರ ಹಾಗೂ ಎಸ್‌ಐ ಹಾಗೂ ಸಿಬ್ಬಂದಿಗಳಿಗೆ ನಗದು ಪುರಸ್ಕಾರವನ್ನು ದ.ಕ. ಜಿಲ್ಲಾ ಪೋಲೀಸ್ ಅಧೀಕ್ಷಕರು ಘೋಷಿಸಿದ್ದಾರೆ.
ಧರ್ಮಸ್ಥಳ ಎಸ್‌ಐಗಳಾದ ಅವಿನಾಶ್, ಕೊರಗಪ್ಪ ನಾಯ್ಕ, ಬೆಳ್ತಂಗಡಿ ಎಸ್‌ಐ ರವಿ ಬಿ.ಎಸ್, ವೇಣೂರು ಎಸ್‌ಐ ಚಂದ್ರಶೇಖರ್, ಪೊಲೀಸರುಗಳಾದ ವೆಂಕಟೇಶ್ ನಾಯ್ಕ, ಸ್ಯಾಮುವೆಲ್, ವಿಶ್ವನಾಥ್ ನಾಯ್ಕಾ, ಬೆನ್ನಿಚ್ಚನ್, ಪ್ರವೀಣ್ ಕೆ.ಎನ್, ಕರೀಮ್, ಕೃಷ್ಣ ನಾಯ್ಕಿ, ಲಾರೇನ್ಸ್ ಪಿ.ಆರ್, ಶಶಿಧರ, ಪ್ರಮೋದಿನಿ, ಪ್ರಮೋದ್, ರಾಹುಲ್ ರಾವ್, ವಿನಯ ಪ್ರಸನ್ನ, ಧರೆಪ್ಪ .ಜೆ, ಸಂದೀಪ್, ಶ್ವೇತ, ಜಯಶ್ರಿ,ವಿಜಯ, ಗೋಪಾಲ್, ಬಂದೇನವಾಜ್ ಬುಡ್ಕಿ, ವಸಂತ್, ವೇದವ್ಯಾಸ, ಲಿಂಗಪ್ಪ, ರವಿ, ಸುಂದರ್ ಇವರಿಗೆ ನಗದು ಬಹುಮಾನ ಘೋಷಿಸಿದ್ದಾರೆ.