×
Ad

ಅಕ್ರಮ ಮರಳು ಸಾಗಾಟ ಆರೋಪ: ಲಾರಿ ಸಹಿತ ಮೂವರು ಸೆರೆ

Update: 2017-11-03 19:48 IST

ಬಂಟ್ವಾಳ, ನ.3: ವಿಟ್ಲ ಕಡೆಯಿಂದ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳ ಸಹಿತ ಮೂರು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹರೀಶ್, ಅಬ್ದುಲ್ ರವೂಫ್, ದೇರಳಕಟ್ಟೆಯ ಖಲೀಲ್ ಬಂಧಿತ ಆರೋಪಿಗಳು. ಇಂದು ಮುಂಜಾನೆ ವಿಟ್ಲ ಸಮೀಪದ ಕನ್ಯಾನ ದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂರು ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ವಿಟ್ಲ ಠಾಣೆಯ ಉಪನಿನಾಗರಾಜ ಮತ್ತು ಅವರ ಸಿಬ್ಬಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News