ನ.7-10: ಗಿನ್ನಿಸ್ ದಾಖಲೆಗಾಗಿ ಅತಿ ಉದ್ದದ ಚಿತ್ರ ರಚನೆ
ಉಡುಪಿ, ನ.3: ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಧೀಶ್ ಕೆ.(17) ನ.7ರಿಂದ 10ರವರೆಗೆ ಕಾಲೇಜಿನಲ್ಲಿ ಗಿನ್ನಿಸ್ ದಾಖಲೆಗಾಗಿ ಅತ್ಯಂತ ಉದ್ದದ ಚಿತ್ರ ರಚನೆಯನ್ನು ಮಾಡಲಿದ್ದಾರೆ.
1000 ಮೀಟರ್ ಉದ್ದದ 10ಸೆ.ಮೀ. ಅಗಲ ಅಳತೆಯ ಡ್ರಾಯಿಂಗ್ ಪೇಪರ್‌ನಲ್ಲಿ ಸ್ಪಚ್ಛ ಭಾರತದ ಪರಿಕಲ್ಪನೆಯೊಂದಿಗೆ ಭವ್ಯ ಭಾರತ, ಕಲುಷಿತ ಭಾರತ, ಸ್ವಚ್ಛ ಭಾರತ, ಅಭಿವೃದ್ಧಿ ಭಾರತ ಕುರಿತು ಅವರು ಚಿತ್ರ ರಚಿಸಲಿದ್ದಾರೆ ಎಂದು ಉಪನ್ಯಾಸಕ ಕಮಲಾಕ್ಷ ಹೆಬ್ಬಾ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಹಿಂದೆ ತಮಿಳುನಾಡಿನ ಪರಿಮಳ ಕಾಂತ್ ಅವರು 2016ರಲ್ಲಿ 660. 222ಮೀ. ಉದ್ದದ ಪೇಪರ್‌ನಲ್ಲಿ ಚಿತ್ರ ಬರೆದು ದಾಖಲೆ ಮಾಡಿದ್ದರು. ಒಂದು ಗಂಟೆಗೆ 35 ಮೀಟರ್‌ನಂತೆ ಪ್ರತಿದಿನ ಎಂಟು ಗಂಟೆಗಳ ಕಾಲ 250 ಮೀಟರ್ ಪೇಪರ್‌ನಲ್ಲಿ ಚಿತ್ರ ಬಿಡಿಸಲಿದ್ದು, ನಾಲ್ಕು ದಿನಗಳಲ್ಲಿ 1000 ಮೀ. ಪೂರ್ಣಗೊಳಿಸಿ ಕೊನೆಗೆ ಎಲ್ಲ ಪೇಪರ್‌ಗಳನ್ನು ಜೋಡಿಸಲಾಗುವುದು ಎಂದು ಪ್ರಧೀಶ್ ಕೆ. ಹೇಳಿದರು.
ಇದಕ್ಕೆ ಸಾಕ್ಷಿಗಳಾಗಿ ಚಿತ್ರಕಲಾವಿದ ರಮೇಶ್ ರಾವ್, ಪಿಡಬ್ಲುಡಿ ಎಇಇ ಡಿ.ವಿ.ಹೆಗಡೆ, ಗಿನ್ನಿಸ್ ದಾಖಲೆ ವೀರ ಗೋಪಾಲ ಖಾರ್ವಿ, ನೋಟರಿ ಕರ್ಜೆ ಬಾಲಕೃಷ್ಣ ಶೆಟ್ಟಿ ಭಾಗವಹಿಸಲಿರುವರು. ಇದರಲ್ಲಿ ಪೈಂಟ್ ಮತ್ತು ಬ್ರಶ್‌ನ್ನು ಬಳಸಲು ಇಲ್ಲ. 35ಮೀಟರ್‌ನ 30 ಪೇಪರ್ ರೋಲ್‌ಗಳನ್ನು ಈ ದಾಖಲೆ ಗಳಾಗಿ ಬಳಸಲಾಗುವುದು ಎಂದರು.
ಈಗಾಗಲೇ ಇವರು 60ನಿಮಿಷಗಳಲ್ಲಿ 59ಚಿತ್ರಗಳನ್ನು ದಾರದಿಂದ ರಚಿಸಿ ಯುನಿಕ್ ವರ್ಲ್ಡ್, ಅಸಿಸ್ಟ್ ವರ್ಲ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಇವರು ರ್ಯುಬಿಕ್ ಕ್ಯೂಬ್‌ನಲ್ಲಿ ಗಿನ್ನಿಸ್ ದಾಖಲೆ ಮಾಡಿರು ಪೃಥ್ವೀಶ್ ಕೆ. ಇವರ ಸಹೋದರ ಸುದ್ದಿಗೋಷ್ಠಿಯಲ್ಲಿ ಕೋಟ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸುಬ್ರಹ್ಮಣ್ಯ ಉಪಾಧ್ಯ, ಪ್ರಾಂಶುಪಾಲ ಜಗದೀಶ್ ನಾವಡ, ಪ್ರಧೀಶ್ ತಂದೆ ಕೆ.ಶ್ಯಾಮ್ ಪ್ರಸಾದ್, ತಾಯಿ ಪ್ರಸನ್ನ ಪಿ.ಭಟ್ ಉಪಸ್ಥಿತರಿದ್ದರು.