ನ.4ರಂದು ‘ಬ್ರೈನ್ ಕ್ವೆಸ್ಟ್’ ಸ್ಪರ್ಧಾ ಉತ್ಸವ
ಉಡುಪಿ, ನ.3: ಉಡುಪಿಯ ಇ ಸ್ಕೂಲ್ ವತಿಯಿಂದ ‘ಬ್ರೈನ್ ಕ್ವೆಸ್ಟ್’ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸವವನ್ನು ನ.4ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 4ಗಂಟೆಯವರೆಗೆ ಉಡುಪಿ ಎಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಟ್ಟಡಗಳಿಗೆ ಬೆಳಕು ಗಾಳಿ ಬರುವ ವ್ಯವಸ್ಥೆಯ ಕುರಿತು ಮೊಡೆಲ್ ಕ್ವೆಸ್ಟ್ ಏರ್ಪಡಿಸಲಾಗಿದೆ. ಅದೇ ರೀತಿ ಪ್ರೊಡಕ್ಟ್ ಕ್ವೆಸ್ಟ್, ರಿಸರ್ಚ್‌ಕ್ವೆಸ್ಟ್, ಎಫ್‌ಎಕ್ಸ್ ಕ್ವೆಸ್ಟ್, ರೇಕ್ವೆಸ್ಟ್ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ. ಈಗಾಗಲೇ 5 ಶಾಲೆಗಳ 100 ವಿದ್ಯಾರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದಾರೆ ಎಂದು ಇ ಸ್ಕೂಲ್‌ನ ಡಾ.ಪೂರ್ಣಿಮಾ ಕಾಮತ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಅದೇ ರೀತಿ ಉಪಕಾರಿ ಕೀಟಗಳ ರಕ್ಷಣೆ ಕುರಿತು ಉಪನ್ಯಾಸ ಕಾರ್ಯಕ್ರಮ ಕೂಡ ನಡೆಯಲಿದೆ. ಭಾಗವಹಿಸಿದ ಎಲ್ಲ ಮಕ್ಕಳಿಗೆ ತಲಾ 100ರೂ. ಮೊತ್ತ ಕೂಪನ್ ನೀಡಲಾಗುವುದು. ಅದರ ಮೂಲಕ ಅವರು ಎಂಜಿಎಂ ಕೋ ಆಪ ರೇಟಿವ್ ಸ್ಟೋರ್‌ನಿಂದ ವಸ್ತುಗಳನ್ನು ಪಡೆಯಬಹುದು ಎಂದು ಅವರು ಹೇಳಿದರು.