×
Ad

ಹೆಲ್ಪ್ ಇಂಡಿಯಾ ಫೌಂಡೇಷನ್ ವತಿಯಿಂದ ಶ್ರವಣ ಕಿಟ್, ಸಹಾಯಧನ ವಿತರಣೆ

Update: 2017-11-03 21:59 IST

ಉಳ್ಳಾಲ, ನ. 3: ಫೌಂಡೇಷನ್ ಸ್ಥಾಪಿಸಿ ಬಡ ವರ್ಗದವರಿಗೆ ಸಹಕರಿಸುವಂತಹ ಕಾರ್ಯ ಸಮಾಜ ಮೆಚ್ಚುವಂತಹದ್ದು, ಇಂತಹ ಕಾರ್ಯ ಎಲ್ಲರಿಗೂ ಮಾದರಿಯಾಗಲಿ ಎಂದು ಸಹಾಯಕ ಪೊಲೀಸ್ ಆಯುಕ್ತ ಕೆ.ರಾಮ ರಾವ್ ಹೇಳಿದರು.

ಅವರು ಶ್ರವಣ ದೋಷವುಳ್ಳ ಖತೀಜ ಎಂಬ ಬಡ ಕುಟುಂಬದ ಮಹಿಳೆಗೆ ಕಲ್ಲಾಪು ಪೊಲೀಸ್ ಸಹಾಯಕ ಆಯುಕ್ತರ ಕಚೇರಿಯಲ್ಲಿ ಹೆಲ್ಪ್ ಇಂಡಿಯಾ ಫೌಂಡೇಷನ್ ದಾನವಾಗಿ ನೀಡಿದ 20,000 ರೂ. ಮೌಲ್ಯದ ಶ್ರವಣ ಕಿಟ್ ಹಾಗೂ  ಸಹಾಯಧನ ಶುಕ್ರವಾರ ವಿತರಿಸಿ ಮಾತನಾಡಿದರು.

ಜಿಲ್ಲೆಯಾದ್ಯಂತ ಶ್ರವಣ ದೋಷವುಳ್ಳ ಹಲವರಿಗೆ ಫೌಂಡೇಷನ್ ಶ್ರವಣ ಕಿಟ್ ವಿತರಿಸುವ ಮೂಲಕ ಅವರನ್ನು ಸಮಾಜದ ಎಲ್ಲರೊಂದಿಗೂ ಬೆರೆಯುವಂತಹ ಕಾರ್ಯ ಮಾಡಿರು ವುದು ಉತ್ತಮವಾದುದು, ಇಂತಹ ಸಾಮಾಜಿಕ ಕಾರ್ಯ ಫೌಂಡೇಷನ್ ವತಿಯಿಂದ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಈ ಸಂದರ್ಭ ಹೆಲ್ಪ್ ಇಂಡಿಯಾ ಫೌಂಡೇಷನ್ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್, ಉಪಾಧ್ಯಕ್ಷ ಫಾರುಕ್ ಪಟ್ಲ, ಸಿರಾಜ್, ಝಾಕಿರ್, ಸಂಶುದ್ದೀನ್ ಎ.ಕೆ, ನಿಯಾಝ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News