×
Ad

ನ. 11ರಂದು ರಾಜೇಂದ್ರ ಕುಮಾರ್, ರವಿರಾಜ್ ಹೆಗ್ಡೆಗೆ ಅಭಿನಂದನೆ

Update: 2017-11-03 22:31 IST

ಉಡುಪಿ, ಅ.3: ಉಡುಪಿ ತಾಲೂಕಿನ ಸಹಕಾರಿಗಳು ಹಾಗೂ ನವೋದಯ ಸ್ವ-ಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಸಹಕಾರ ರತ್ನ ಪುಸ್ಕೃತ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ರಾಷ್ಟ್ರೀಯ ಡೈರಿ ಎಕ್ಸಲೆನ್ಸ್ ಪ್ರಶಸ್ತಿ ಪುರಸ್ಕೃತ ದ.ಕ. ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಅವರಿಗೆ ಅಭಿನಂದನಾ ಸಮಾರಂಭವನ್ನು ನ.11ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 9ಗಂಟೆಗೆ ಉಡುಪಿಯ ಪುರಭವನದಿಂದ ಸುಮಾರು 12,000 ಸಹಕಾರಿಗಳ ಮೆರವಣಿಗೆ ಹೊರಡಲಿದೆ. ಸಮಾರಂಭದಲ್ಲಿ ರಾಜ್ಯ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅಭಿನಂದನೆ ಮಾಡಲಿದ್ದು, ಅಧ್ಯಕ್ಷತೆಯನ್ನು, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಹಿಸಲಿದ್ದಾರೆ. ಇಂದು ನಡೆದ ಅಭಿನಂಧನಾ ಪೂರ್ವ ತಯಾರಿ ಸಭೆಯಲ್ಲಿ ಇಂದ್ರಾಳಿ ಜಯಕರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಯಶ್‌ಪಾಲ್ ಸುವರ್ಣ, ಕಾಪು ದಿವಾಕರ ಶೆಟ್ಟಿ, ಕೆಮ್ಮಣ್ಣು ಸತೀಶ್ ಶೆಟ್ಟಿ, ಪಡುಬಿದ್ರಿ ಸುಧೀರ್ ಕುಮಾರ್, ಪ್ರತಾಪ್ ಕುಮಾರ್ ಶೆಟ್ಟಿ ಸಾಸ್ತಾನ, ಮೈರ್ಮಾಡಿ ಅಶೋಕ್ ಕುಮಾರ್ ಶೆಟ್ಟಿ, ಇನ್ನಂಜೆ ರಾಜೇಶ್ ರಾವ್, ವಿ.ಚಂದ್ರಹಾಸ್ ಶೆಟ್ಟಿ, ಸ್ಕ್ಯಾಡ್ಸ್‌ನ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಹಿರಿಯ ಸಹಕಾರಿ ಕೃಷ್ಣರಾಜ ಸರಳಾಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News