×
Ad

ಕಾಪು ಎಸ್ ಐ ವಿರುದ್ಧ ಠಾಣೆಗೆ ಮುತ್ತಿಗೆ

Update: 2017-11-03 23:57 IST

ಕಾಪು, ನ. 3: ಇಲ್ಲಿನ ಠಾಣಾ ವ್ಯಾಪ್ತಿಯ ಮಜೂರ್ ಕಚೇರಿ ಯೊಂದರ ಬಳಿ  ನಿಂತಿದ್ದ ಬೈಕ್ ನ ದಾಖಲೆ ಪತ್ರಗಳನ್ನು ಪಡೆದುಕೊಂಡು ಹೋಗಿರುವುದನ್ನು ವಿರೋಧಿಸಿ ಸಾರ್ವಜನಿಕರು ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಮಜೂರಿನಲ್ಲಿ ಮನೆ ಪಕ್ಕದಲ್ಲಿ ಇರುವ ಕಚೇರಿ ಬಳಿ ಸಂಜೆ 7.30ರ ವೇಳೆಗೆ ಬೈಕ್ ನಿಲ್ಲಿಸಿ ಯುವಕರು ಮಾತನಾಡುತಿದ್ದರು ಎನ್ನಲಾಗಿದೆ. ಈ ವೇಳೆ ಪೊಲೀಸ್ ವಾಹನದಲ್ಲಿ ಬಂದ ಎಸ್ ಐ ಮತ್ತು ಸಿಬ್ಬಂದಿ ಅವರನ್ನು ತರಾಟೆಗೆ ತೆಗೆದುಕೊಂಡು ಬೈಕ್ ನ ದಾಖಲೆ ಪತ್ರವನ್ನು ಪಡೆದುಕೊಂಡು ಠಾಣೆಗೆ ಬರುವಂತೆ ಎಚ್ಚರಿಕೆ ನೀಡಿ ಹೊರಟಿದ್ದರು.
ಇದರಿಂದ ಆಕ್ರೋಶಗೊಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಠಾಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಠಾಣೆ ಎದುರು ಭಾರಿ ಸಂಖ್ಯೆ ಯಲ್ಲಿ ಜನ ಜಮಾಯಿಸಿದ್ದರು. ಸ್ಥಳಕ್ಕೆ ಬಂದ ಶಾಸಕ ವಿನಯ ಕುಮಾರ್ ಸೊರಕೆ ಸರ್ಕಲ್ ಇನ್ಸ್ಪೆಕ್ಟರ್ ಹಾಲ ಮೂರ್ತಿಯೊಂದಿಗೆ ಮಾತುಕತೆ ನಡೆಸಿ ಪ್ರಕರಣ ಇತ್ಯರ್ಥ ಗೊಳಿಸಿದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News