×
Ad

ಕಲ್ಲಡ್ಕ: ಗೋದಾಮಿಗೆ ಬೆಂಕಿ; ಅಪಾರ ನಷ್ಟ

Update: 2017-11-04 19:24 IST

ಬಂಟ್ವಾಳ, ನ. 4: ಕಲ್ಲಡ್ಕದ ತೆಂಗಿನಕಾಯಿ ಎಣ್ಣೆ ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ಶನಿವಾರ ನಡೆದಿದೆ.

ಕಲ್ಲಡ್ಕದ ಉದ್ಯಮಿ ಮುಹಮ್ಮದ್ ಖಾಲಿದ್ ಎಂಬವರಿಗೆ ಸೇರಿದ ಎಂ.ಕೆ. ಟ್ರೇಡಿಂಗ್ ಆಯಿಲ್ ಗೋದಾಮಿಗೆ ಈ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ತೀರ್ವತೆಗೆ ಗೋದಾಮಿನಲ್ಲಿದ್ದ ಯಂತ್ರೋಪಕರಣ ಸೇರಿದಂತೆ ಇನ್ನಿತರ ಪರಿಕರಗಳು ಸುಟ್ಟು ಭಸ್ಮವಾಗಿದೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿದ ಬಂಟ್ವಾಳ ಅಗ್ನಿಶಾಮಕ ಠಾಣೆಯ 2 ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಬಂಟ್ವಾಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.  ಘಟನೆಯಿಂದ ಸುಮಾರು 25 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News