ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಗತ್ಯ: ಸೈಫುಲ್ಲಾ ತಂಙಳ್

Update: 2017-11-04 15:53 GMT

ಉಳ್ಳಾಲ, ನ. 4: ಶೋಕಿಗಾಗಿ ಸ್ನೇಹಿತರ ಜೊತೆಗೂಡಿ ಆರಂಭಿಸುವ ಗಾಂಜಾ ಬಳಿಕ ಕೋಕೇನ್ ಮೂಲಕ ಮಾರ್ಪಾಡಾಗುತ್ತದೆ. ಮುಂದೆ ಅಮಲು ಪದಾರ್ಥದ ದಾಸನಾಗಿ ವ್ಯಕ್ತಿ ಮಾರ್ಪಾಡು ಆಗುವುದರಿಂದ ಸಮಾಜ, ಸಮುದಾಯ, ಮನೆಗೆ ಕಂಟಕನಾಗಿ ಮಾರ್ಪಾಡಾಗುತ್ತಾನೆ. ಇಂದು ಯುವಸಮುದಾಯ ಇಂತಹ ವ್ಯಸನಕ್ಕೆ ಬಲಿಯಾಗುತ್ತಿದ್ದು, ಹೆತ್ತವರ ನಿರ್ಲಕ್ಷ್ಯವೇ ಮೂಲ ಕಾರಣ ಎನಿಸಿದೆ ಇದಕ್ಕಾಗಿ ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಸೈಯದ್ ಯು.ಕೆ.ಸೈಫುಲ್ಲಾ ತಂಙಳ್ ಅಭಿಪ್ರಾಯಪಟ್ಟರು.

 ಉಚ್ಚಿಲ ಕಾಟುಂಗರೆಗುಡ್ಡೆ ಯುನೈಟೆಡ್ ಸೋಶಿಯಲ್ ಆರ್ಗನೈಝೇಶನ್ ವತಿಯಿಂದ ಶನಿವಾರ ಕೆ.ಸಿ.ನಗರ ಫಲಾಹ್ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಆಯೋಜಿಸಲಾಗಿದ್ದ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. 

ಭಾಷೆಗಳು, ವಿವಿಧ ವಿಚಾರಗಳ ಬಗ್ಗೆ ಮಾತನಾಡುವ ಸಂಘಟನೆಗಳು ಮಾದಕ ವಸ್ತುಗಳ ವಿರುದ್ಧವೂ ಮಾತನಾಡಲು ಮುಂದಾಗಬೇಕಾದ ಅಗತ್ಯತೆ ಇಂದಿನ ಸಮಾಜಕ್ಕೆ ಇದೆ ಎಂದು ಹೇಳಿದರು.

ಉಳ್ಳಾಲ ಠಾಣೆಯ ಪ್ರೊಭೆಷನರಿ ಉಪನಿರೀಕ್ಷಕ ವಿನಾಯಕ, ಫಲಾಹ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯು.ಬಿ.ಮಹಮ್ಮದ್, ಉಪಾಧ್ಯಕ್ಷ ಟಿ.ಎಂ.ಅಬ್ಬಾಸ್, ಕೋಶಾಧಿಕಾರಿ ಇಸ್ಮಾಯಿಲ್ ನಾಗತೋಟ, ಸದಸ್ಯ ಅಬ್ಬಾಸ್ ಉಚ್ಚಿಲ್, ಹೈಕೋರ್ಟ್ ನ್ಯಾಯವಾದಿ ಮುಝಫ್ಫರ್ ಅಹ್ಮದ್, ಸಲಾಂ ಜೆ.ಐ, ರಿಯಾರ್ ಕಡಂಬು ಮುಖ್ಯ ಅತಿಥಿಗಳಾಗಿದ್ದರು.

ಯುನೈಟೆಡ್ ಸೋಶಿಯಲ್ ವೆಲ್ಫೇರ್ ಆರ್ಗನೈಝೇಶನ್ ಅಧ್ಯಕ್ಷ ರಹೀಂ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ಶಫೀಕ್ ಕೆ.ಸಿ.ನಗರ, ಸಂಚಾಲಕ ಸಂಶುದ್ದೀನ್ ಉಚ್ಚಿಲ್, ಪದಾಧಿಕಾರಿಗಳಾದ ಹಕೀಂ ಕೆ.ಸಿ.ನಗರ, ರಶೀದ್ ಕೆ.ಸಿ.ನಗರ, ಲತೀಫ್ ಕೆ.ಸಿ.ನಗರ, ಝಹೀರ್ ಕೆ.ಸಿ.ನಗರ, ಜಮಾಲ್ ಅಜ್ಜಿನಡ್ಕ, ಇರ್ಷಾದ್ ಅಜ್ಜಿನಡ್ಕ, ತಂಝೀಲ್ ಅಹ್ಮದ್, ಮಜೀದ್ ತಲಪಾಡಿ ಉಪಸ್ಥಿತರಿದ್ದರು. ಸಂಚಾಲಕ ಸಿದ್ದೀಕ್ ತಲಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಶಬ್ಬೀರ್ ಕೆ.ಸಿ.ನಗರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News