ಕುವೈತ್: ಸಮುದ್ರಕ್ಕೆ ಮಾಲಿನ್ಯ ಎಸೆದರೆ 10,000 ದಿನಾರ್ ದಂಡ
ಕುವೈತ್, ನ. 4: ಪರಿಸರ ಕಾನೂನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪರಿಸರ ಸಂರಕ್ಷಣಾ ಅಥಾರಿಟಿ ತಿಳಿಸಿದೆ.
ಸಮುದ್ರ ತೀರಗಳಲ್ಲಿ ಬಾಟಲಿ ಇತ್ಯಾದಿ ಎಸೆದರೆ ಐವತ್ತು ದಿನಾರ್ ದಂಡ ವಿಧಿಸಲಾಗುವುದು. ಸಮುದ್ರ ತೀರದಲ್ಲಿ ಮಾಲಿನ್ಯ ಎಸೆದರೆ 10,000 ದಿನಾರ್ ದಂಡ ವಿಧಿಸಲಾಗುವುದು ಎಂದು ಅಥಾರಿಟಿ ಮುನ್ನೆಚ್ಚರಿಕೆ ನೀಡಿದೆ.
ಬೀಚ್‍ಗಳಲ್ಲಿ, ಸಾರ್ವಜನಿಕ ಪಾರ್ಕ್‍ಗಳಲ್ಲಿ ಮಲಿನಗೊಳಿಸದಂತೆ ಕಳೆದ ವಾರ ಪರಿಸರ ಸಂರಕ್ಷಣಾ ಅಥಾರಿಟಿ ಆದೇಶ ಹೊರಡಿಸಿತ್ತು. ಆದೇಶವನ್ನು ಜಾರಿಗೊಳಿಸಲಾಗುತ್ತಿ ದೆಯೇ ಎನ್ನುವುದರತ್ತ ನಿಗಾವಿರಿಸುವುದು ಅಧಿಕಾರಿಗಳ ತೀರ್ಮಾನವಾಗಿದೆ. ಸಂರಕ್ಷಣಾ ಅಥಾರಿಟಿ, ಪರಿಸರ ಪೊಲೀಸ್, ಮುನ್ಸಿಪಾಲಿಟಿ ಪ್ರತಿನಿಧಿಗಳಿರುವ ವಿಶೇಷ ತಂಡ ನಿಗಾವಿರಿಸಲಿದೆ.
ಆಹಾರದ ಅವಶೇಷಗಳು ಮುಂತಾದುವುಗಳನ್ನು ಚೆಲ್ಲಿದರೆ, ನಿಷೇಧಿತ ಸ್ಥಳದಲ್ಲಿ ಮಾಂಸ ಸುಟ್ಟರೆ 5,000 ದಿನಾರ್‍ನಿಂದ 10,000 ದಿನಾರ್‍ವರೆಗೆ ದಂಡವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ಸ್ಥಳದಗಳಲ್ಲಿ ಬಾಟಲಿ ಉಪಯೋಗಿಸುವುದು ಕಾನೂನು ಉಲ್ಲಂಘನೆಯಾಗಿದೆ. ಬಾಟಲಿ ಉಪಯೋಗಿಸಿದರೆ 50 ದಿನಾರ್ ದಂಡ ತೆರಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಉಲ್ಲಂಘಿಸಿದರೆ ಶಿಕ್ಷೆಯಿದೆ ಎಂದು ಅಭಿವೃದ್ಧಿ ಅಥಾರಿಟಿ ಮುಖ್ಯಸ್ಥ ಫೈಝಲ್ ಅಲ್ ಹಸಾವಿ ತಿಳಿಸಿದ್ದಾರೆ.