ಬಿಐಟಿಯಿಂದ 2ನೆ ಹಂತದ ‘ಸ್ವಚ್ಛ ಮಂಗಳೂರು ಅಭಿಯಾನ’ಕ್ಕೆ ಚಾಲನೆ
ಮಂಗಳೂರು, ನ.5: ಬ್ಯಾರೀಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ವತಿಯಿಂದ ತಲಪಾಡಿ ಗ್ರಾಪಂ ಸಹಭಾಗಿತ್ವದಲ್ಲಿ 2ನೆ ಹಂತದ ‘ಸ್ವಚ್ಛ ಮಂಗಳೂರು ಅಭಿಯಾನ’ಕ್ಕೆ ಇಂದು ಬೆಳಗ್ಗೆ ತಲಪಾಡಿಯ ಕೆ.ಸಿ.ನಗರದಲ್ಲಿ ಚಾಲನೆ ದೊರೆಯಿತು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಸದಸ್ಯ ಸಿದ್ದೀಕ್ ತಲಪಾಡಿ, ತಲಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಆಳ್ವ, ಸದಸ್ಯರಾದ ಇಬ್ರಾಹೀಂ ತಲಪಾಡಿ, ಫಯಾಝ್ ಪಿಲಿಕೂರು, ಝೈಬುನ್ನಿಸಾ, ಹಸೈನಾರ್, ಅಬ್ದುಲ್ ಖಾದರ್, ಚಂದ್ರಹಾಸ, ಶ್ರೀನಿವಾಸ, ಸಾಮಾಜಿಕ ಕಾರ್ಯಕರ್ತರಾದ ಶಂಸುದ್ದೀನ್ ಉಚ್ಚಿಲ್, ಅಬ್ಬಾಸ್ ಉಚ್ಚಿಲ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಐಟಿ ಪ್ರಾಂಶುಪಾಲ ಡಾ.ಆ್ಯಂಟನಿ ಎ.ಜೆ., ಅಕ್ಟೋಬರ್ 15ರಂದು ನಾಟೆಕಲ್ ಜಂಕ್ಷನ್‌ನಿಂದ ಕುತ್ತಾರ್ ಜಂಕ್ಷನ್‌ವರೆಗೆ ಪ್ರಥಮ ಹಂತದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತು. ಈ ಸಂದರ್ಭ ಸ್ಥಳೀಯರಿಗೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಂತೆ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಪ್ರಸ್ತುತ ಆ ಪ್ರದೇಶ ಸ್ವಚ್ಛವಾಗಿದೆ. ಇದೇ ರೀತಿ ಇದೀಗ ಕೆ.ಸಿ. ನಗರದಲ್ಲಿ ತಲಪಾಡಿ ಪಂಚಾಯತ್ ಅಧಿಕಾರಿಗಳ ವಿನಂತಿಯ ಮೇರೆಗೆ ಈ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.