×
Ad

ಗಂಡಿಬಾಗಿಲು ಮಜ್ಲಿಸುನ್ನೂರು ವಾರ್ಷಿಕೋತ್ಸವ

Update: 2017-11-05 17:22 IST

ಉಪ್ಪಿನಂಗಡಿ, ನ. 5: ಮಜ್ಲಿಸುನ್ನೂರು ಮೂಲಕ ನಾವುಗಳು ಪಠಿಸುವ ದ್ಸಿಕ್ರ್, ಸ್ವಲಾತ್‌ನಿಂದ ದೇವನ ಸಂಪ್ರೀತಿ ಪಡೆಯವುದರೊಂದಿಗೆ ನಮ್ಮ ಕಷ್ಟ ಕಾರ್ಪಣ್ಯಗಳಿಗೆ ಸಹಾಯ ಸಾಧ್ಯ ಎಂದು ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಮಹಮ್ಮದ್ ಜುನೈದ್ ಜಿಫ್ರಿ ತಂಙಳ್ ಹೇಳಿದರು.

ಅವರು  ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಹಾಗೂ ಹಿಮಾಯತುಲ್ ಇಸ್ಲಾಂ ಮದ್ರಸ ಎಸ್.ಕೆ.ಎಸ್.ಬಿ.ವಿ. ಸಂಘಟನೆ ಆಶ್ರಯದಲ್ಲಿ ನಡೆದ ಮಜ್ಲಿಸುನ್ನೂರು ಪ್ರಥಮ ವಾರ್ಷಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಗಂಡಿಬಾಗಿಲು ಮಸೀದಿಯಲ್ಲಿ ಪ್ರತೀ ತಿಂಗಳು ನಡೆಯುವ ಮಜ್ಲಿಸುನ್ನೂರು ಕಾರ್ಯಕ್ರಮ ಜನಪ್ರೀಯತೆ ಗಳಿಸುತ್ತಿದ್ದು, ಇಲ್ಲಿನ ಖತೀಬ್ ಅವರ ಸೇವೆ ಶ್ಲಾಘನೀಯವಾಗಿದೆ ಎಂದರು.

ಪುತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಎಸ್.ಬಿ. ಮಹಮ್ಮದ್ ದಾರಿಮಿ ಮಾತನಾಡಿ ನಮ್ಮ ಮಕ್ಕಳು ಕಲಿಯುವ ಮದ್ರಸ ಸಂಸ್ಕಾರದ ಕೇಂದ್ರವಾಗಿದ್ದು, ನಮ್ಮ ಮಕ್ಕಳು ತಮ್ಮ ಸಂಘಟನೆ ಮೂಲಕ ಮಾಡುವ ಕೊಡುಗೆ, ಸೇವೆಗಳು ಪ್ರಶಂಶನೀಯ ಎಂದರು.

ಗಂಡಿಬಾಗಿಲು ಮಸೀದಿ ಖತೀಬ್ ಹಾದಿ ಅನಸ್ ತಂಙಳ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಂಡಿಬಾಗಿಲು ಖುತುಬಿಯಾ ಜುಮಾ ಮಸೀದಿ ಗೌರವಾಧ್ಯಕ್ಷ, ಹಿರಿಯ ಧಾರ್ಮಿಕ ವಿದ್ವಾಂಸ ಡಾ. ಹಾಜಿ ಕೆ.ಎಂ. ಶಾಹ್ ಮುಸ್ಲಿಯಾರ್ ದುವಾಃ ನೆರವೇರಿಸಿದರು. ಕೇರಳ ಕೊಲ್ಲಂನ ಶಮೀರ್ ದಾರಿಮಿ ಕೊಲ್ಲಂ ಧಾರ್ಮಿಕ ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಹನೀಫ್ ಫೈಝಿ, ಕೊಂತೂರು ಮಸೀದಿ ಖತೀಬ್ ರಶೀದ್ ರಹ್ಮಾನಿ, ಉಪ್ಪಿನಂಗಡಿ ರೇಂಜ್ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಕೊಳ್ಳೇಜಾಲ್, ಕೆಮ್ಮಾರ ಮದ್ರಸ ಸಮಿತಿ ಅಧ್ಯಕ್ಷ ಎನ್. ಎ. ಇಸಾಕ್, ಆತೂರು ಬದ್ರಿಯಾ ಮಸೀದಿ ಅಧ್ಯಕ್ಷ ಬಿ.ಕೆ. ಅಬ್ದುಲ್ ರಝಾಕ್, ಕುದ್ಲೂರು ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮರ್ವೇಲ್, ಮಾಡನ್ನೂರು ಅಕಾಡೆಮಿ ಪಿಟಿಎ ಅಧ್ಯಕ್ಷ ಫಲೂಲುದ್ದೀನ್ ಹೇಂತಾರ್, ಬಿ.ಕೆ. ಮಹಮ್ಮದ್ ಹಾಜಿ ಕುಂಡಾಜೆ, ಉದ್ಯಮಿಗಳಾದ ಹಸೈನಾರ್ ಹಾಜಿ ಕೊಲ, ಎಲ್. ಟಿ. ರಜಾಕ್ ಹಾಜಿ ಪುತ್ತೂರು, ರಶೀದ್ ಹಾಜಿ ಪರ್ಲಡ್ಕ, ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಗಂಡಿಬಾಗಿಲು ಮಸೀದಿ ಸಲಹಾ ಸಮಿತಿ ಸದಸ್ಯ ಯೂಸುಫ್ ಹಾಜಿ, ಉಪಾಧ್ಯಕ್ಷ ಎಸ್. ಆದಂ ಹಾಜಿ, ಮದ್ರಸ ಸಮಿತಿ ಕಾರ್ಯದರ್ಶಿ ಅಬ್ದುಲ್ ರಜಾಕ್ ಮರ್ವೇಲ್, ಕೊಲ ಗ್ರಾಮ ಪಂಚಾಯಿತಿ ಸದಸ್ಯ ನಝೀರ್ ಪೂರಿಂಗ, ಎಸ್.ಕೆ.ಎಸ್.ಎಸ್.ಎಫ್. ಸಮಿತಿ ಅಧ್ಯಕ್ಷ ಎಸ್.ಪಿ. ಖಲಂದರ್, ದಫ್ ಸಮಿತಿ ಅಧ್ಯಕ್ಷ ನಿಸಾರ್ ಎಸ್., ಎಸ್.ಕೆ.ಎಸ್.ಬಿ.ವಿ. ಅಧ್ಯಕ್ಷ ಫಝಲ್ ಉಪಸ್ಥಿತರಿದ್ದರು.

ಸದರ್ ಮುಅಲ್ಲಿಂ ಅಬ್ದುಲ್ ರಹಿಮಾನ್ ಅರ್ಶದಿ ಸ್ವಾಗತಿಸಿ, ಕಾರ್ಯದರ್ಶಿ ಜಿ. ಮಹಮ್ಮದ್ ರಫೀಕ್ ವಂದಿಸಿದರು. ಅಶ್ರಫ್ ಮೌಲವಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News